ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕಗ್ಗದ ಕೊಡುಗೆ ಅಪಾರ

FotoJet (1)
ಮುಳಬಾಗಿಲು ಡಿವಿಜಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಡಿವಿಜಿಯವರ ಜಯಂತಿಯಲ್ಲಿ ಡಾ.ಎಂ.ಆರ್​.ರವಿ, ವಿ.ಗೀತಾ, ಮಂಗಮ್ಮ ಮುನಿಸ್ವಾಮಿ, ಸರ್ವೇಶ್​, ವಿಜಯಲಕ್ಷಿ$್ಮ, ಕೆ.ಎನ್​.ರಾಮಚಂದ್ರ, ವಿ.ಶ್ರೀಧರ್​, ಇದ್ದರು.
Published on

ಮುಳಬಾಗಿಲು : ಸಾಹಿತ್ಯ ಕ್ಷೇತ್ರದ ದಿಗ್ಗಜ ಡಿ.ವಿ.ಗುಂಡಪ್ಪ ಅವರು ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮುತ್ತು ರತ್ನಗಳ ಒಳಗೊಂಡ ಸ್ವರ್ಣ ಕಿರೀಟ ನೀಡಿದ ಮಹಾನ್​ ಸಾಧಕರು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಬಣ್ಣಿಸಿದರು.

ನಗರದ ಡಿವಿಜಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸತಿ ಇಲಾಖೆ, ಡಿವಿಜಿ ಪ್ರತಿಷ್ಠಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್​ನಿಂದ ಸೋಮವಾರ ಹಮ್ಮಿಕೊಂಡಿದ್ದ ಡಿವಿಜಿ 138ನೇ ಜಯಂತಿಯಲ್ಲಿ ಮಾತನಾಡಿದರು.

ಕ್ಷೇತ್ರವು ಜಿಲ್ಲೆಯ ಐತಿಹಾಸಿಕ, ಚಾರಿತ್ರಿಕ, ರಾಜಕೀಯ, ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಅವಿಭಜಿತ ಜಿಲ್ಲೆಗೆ ಸರ್​.ಎಂ.ವಿಶ್ವೇಶ್ವರಯ್ಯ, ಡಿ.ವಿ.ಗುಂಡಪ್ಪ ಮತ್ತು ಮಾಸ್ತಿ ವೆಂಕಟೇಶ ಅಯ್ಯಂಗಾರ್​ ಅವರು ಜಿಲ್ಲೆಯ ತ್ರಿರತ್ನಗಳು ಎಂದರು.

ಡಿವಿಜಿ ಅವರು ವೈವಿಧ್ಯಮಯ ವ್ಯಕ್ತಿತ್ವ ಹೊಂದಿದ್ದ ವ್ಯಕ್ತಿ. ಅವರ ಮಂಕುತಿಮ್ಮನ ಕಗ್ಗದ ಪದ್ಯಗಳು ನಮ್ಮ ವ್ಯಕ್ತಿತ್ವ ರೂಪಿಸುತ್ತವೆ. ಚಾರಿತ್ರ್ಯ ನಿಮಾರ್ಣ ಮಾಡುವಂತಹ ಶಕ್ತಿ ಡಿವಿಜಿ ಬರವಣಿಗೆಗೆ ಇದೆ. ಜೀವನಕ್ಕೆ ಕಗ್ಗ ದಾರಿದೀಪ ಎಂದರು. ತಹಸೀಲ್ದಾರ್​ ವಿ.ಗೀತಾ ಮಾತನಾಡಿ, ಕನ್ನಡ ಸಾರಸ್ವತ್ವ ಲೋಕಕ್ಕೆ ಸ್ವರ್ಣ ಕಿರೀಟವನ್ನು ಕನ್ನಡ ಸಾಹಿತ್ಯದ ಮೂಲಕ ನೀಡಿದ ಮಹಾನ್​ ಆದರ್ಶ ಸಾಹಿತಿ ಎಂದರು. ಕನ್ನಡ ಸಾಹಿತ್ಯ ಪರಿಷತ್​ನ ಜಿಲ್ಲಾಧ್ಯಕ್ಷ ನಾಯಕರಹಳ್ಳಿ ಎನ್​.ಬಿ. ಗೋಪಾಲಗೌಡ, ಮಾಜಿ ಅಧ್ಯಕ್ಷ ಉಪನ್ಯಾಸಕ ಜೆ.ಜಿ.ನಾಗರಾಜ್​ ಅವರು ಡಿವಿಜಿ ಅವರ ಜೀವನ ಚರಿತ್ರೆ ಬಗ್ಗೆ ವಿವರಿಸಿದರು. ಡಿವಿಜಿ ಅವರ ಭಾವಚಿತ್ರದ ಪುಷ್ಪ ಪಲ್ಲಕ್ಕಿಗೆ ಶಾಸಕ ಸಮೃದ್ಧಿ ವಿ.ಮಂಜುನಾಥ್​ ಚಾಲನೆ ನೀಡಿದರು. ನಗರದ ಮುಖ್ಯ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ ಮಾಡಲಾಯಿತು. ತಮಟೆ ವಾದ್ಯ, ಗಾರುಡಿ ಗೊಂಬೆ, ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ತಾಪಂ ಇಒ ಸರ್ವೇಶ್​, ಕನ್ನಡ ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷಿ$್ಮ, ಬಿಇಒ ಕೆ. ಎನ್​.ರಾಮಚಂದ್ರ, ನಗರಸಭೆ ಪೌರಾಯುಕ್ತ ವಿ. ಶ್ರೀಧರ್​, ಮಾಜಿ ಸದಸ್ಯೆ ರಾಧಿಕಾ ರಾಜಶೇಖರ್​, ಕಸಾಪ ಜಿಲ್ಲಾಧ್ಯಕ್ಷ ಗೋಪಾಲಗೌಡ, ತಾಲೂಕು ಅಧ್ಯಕ್ಷ ಜಗದೀಶ್​, ಗಡಿನಾಡು ಪ್ರತಿನಿಧಿ ತಾಯಲೂರು ಗೋಪಿನಾಥ್​, ಸಾಹಿತಿ ಡಾ. ಆರ್​. ಶಂಕರಪ್ಪ, ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಶಂಕರ್​ ಕೇಸರಿ, ಡಿವಿಜಿ ಕನ್ನಡ ಸಂಘದ ಅಧ್ಯಕ್ಷ ಕೆ. ಮಧುಸೂದನ್​, ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎಚ್​. ವೆಂಕಟಗಿರಿಯಪ್ಪ, ಜಿಲ್ಲಾ ಉಪಾಧ್ಯಕ್ಷ ಓಬಳರೆಡ್ಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಮುನಿವೆಂಕಟಪ್ಪ, ಡಿವಿಜಿ ಶಾಲೆಯ ಮುಖ್ಯ ಶಿಕ್ಷಕ ಸೊಣ್ಣಪ್ಪ, ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಶಂಕರ್​ ಕೇಸರಿ, ಡಿವಿಜಿ ಕನ್ನಡ ಸಂಘದ ಅಧ್ಯಕ್ಷ ಕೆ. ಮಧುಸೂದನ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net