

ಕಾರವಾರ: ಸರ್ಕಾರದ ಸುತ್ತೋಲೆಗಳನ್ನು ಪಾಲಿಸುವುದು, ಯಾಂತ್ರಿಕವಾಗಿ ಕಡತ ವಿಲೇವಾರಿ ಮಾಡುವುದು ಮಾತ್ರ ತಮ್ಮ ಕೆಲಸ ಎಂದು ಭಾವಿಸದೇ ಜಿಲ್ಲಾಡಳಿತದ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಂದ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ದಿನಾಶ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಮಾನವ ಸಂವೇದನೆಯ ಸೂಕ್ಷ್ಮತೆಗಳು ಇಲ್ಲದೇ ತಾಂತ್ರಿಕವಾಗಿ ಆಡಳಿತ ನಡೆಸಿದರೆ ಅದಕ್ಕೇ ಅರ್ಥವೇ ಇರುವುದಿಲ್ಲ. ಸಾಮಾನ್ಯ ಜನರ ಭಾವನೆಗಳಿಗೆ ಸ್ಪಂದಿಸುವ ಕೆಲಸವಾದರೆ, ಸರ್ಕಾರದ ಮೇಲೆ ವಿಶ್ವಾಸಾರ್ಹತೆ ಹೆಚ್ಚುತ್ತದೆ ಎಂದರು.
ಸರ್ಕಾರದ ಮಟ್ಟದಲ್ಲೂ ಆಡಳಿತ ವ್ಯವಸ್ಥೆಗೆ ಗಮನ ಕೊಡುತ್ತಿಲ್ಲ. ಜಿಲ್ಲಾಡಳಿತವೂ ನಿರ್ಲಕ್ಷ್ಯ ವಹಿಸಿದೆ ಎಂದು ಹಲವು ಉದಾಹರಣೆ ಕೊಟ್ಟು ವಿವರಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗುತ್ತದೆ ಎಂಬ ಕಾರಣ ನೀಡಿ, ಕಾರವಾರದ ಸುರಂಗ ಸೇರಿ ವಿವಿಧ ಪ್ರದೇಶಗಳಲ್ಲಿ ಓಡಾಟವನ್ನು ನಿಷೇಽಸಲಾಗಿದೆ. ಇದರಿಂದಲೇ ಅಪಘಾತಗಳು ಹೆಚ್ಚಾಗುತ್ತಿದೆ. ಜನರ ಸಾಯುತ್ತಿದೆ. ಒಂದು ಸೇತುವೆ ಕುಸಿದ ಕಾರಣ ನೀಡಿ ರಾಷ್ಟ್ರೀಯ ಹೆದ್ದಾರಿ 66 ರ ಹಲವು ಸೇತುವೆಗಳ ಮೇಲೆ ಸಂಚಾರವನ್ನು ನಿಷೇಽಸಲಾಗಿದೆ. ಅದರಿಂದಲೂ ಅಪಘಾತಗಳು ಹೆಚ್ಚುತ್ತಿವೆ ತಾಂತ್ರಿಕವಾಗಿ ನಿಮ್ಮನ್ನು ಬಚಾವ್ ಮಾಡಿಕೊಳ್ಳಲು ಜನರ ಜೀವಗಳಿಗೆ ಬೆಲೆ ಇಲ್ಲದಂತೆ ಮಾಡಿದ್ದೀರಿ. ರಾಷ್ಟ್ರೀಯ ಹೆದ್ದಾರಿ ಅಽಕಾರಿಗಳೂ ತಾಂತ್ರಿಕವಾಗಿ ನಿಮಗೆ ಪಟ್ಟಿ ಕೊಟ್ಟಿದ್ದಾರೆ. ಎಂದು ಜಿಲ್ಲಾಧಿಕಾರಿ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಎನ್‌ಎಚ್‌ಎಐ ಅಽಕಾರಿಗಳ ವಿರುದ್ಧ ಅಸಮಾಧಾನ
ಜಿಲ್ಲೆಯ ರಸ್ತೆಗಳು ಹೊಂಡ ಬಿದ್ದಿದ್ದು, ಅದನ್ನು ತಕ್ಷಣ ತುಂಬುವ ಕೆಲಸ ಮಾಡಬೇಕು ಎಂದು ಸೂಚಿಸಿದ ಕಾಗೇರಿ. ಎನ್‌ಎಚ್‌ಎಐ ಅಽಕಾರಿಗಳ ವಿರುದ್ಧವೂ ಅಸಮಾಧಾನ ಹೊರ ಹಾಕಿದರು. ಶಿರಸಿ-ಹಾವೇರಿ ಹೆದ್ದಾರಿ ಪ್ರಾರಂಭವಾಗುವ ಶಿರಸಿ ನಗರದಲ್ಲಿ ಕೇವಲ 12 ಮೀಟರ್ ವಿಸ್ತರಣೆಗೆ ಎನ್‌ಎಚ್‌ಎಐ ಅಽಕಾರಿಗಳು ಅನುಮೋದನೆ ನೀಡಿದ್ದಾರೆ. ಶಿರಸಿ ಕುಮಟಾ ರಸ್ತೆ 18 ಮೀಟರ್ ಅಗಲವಿದೆ. ಇದರಿಂದ ನಗರದಲ್ಲಿಯೇ ಬಾಟಲ್ ನೆಕ್ ಆಗಲಿದೆ. ಮುಂದಾಲೋಚನೆ ಇಲ್ಲದೇ ಯೋಜನೆ ಮಾಡಲಾಗಿದೆ. ಇದರಿಂದ ಎನ್‌ಎಎಐ ಹಿರಿಯ ಅಽಕಾರಿಗಳಿಗೆ ತಿಳಿಸಲಾಗಿದ್ದು, 12 ಮೀಟರ್ ಬದಲು 18 ಮೀಟರ್ ವಿಸ್ತರಣೆಗೆ ಕ್ರಮ ವಹಿಸಿ ಎಂದರು.
ಕಾರವಾರದ ಶಿರವಾಡ ರೈಲ್ವೆ ನಿಲ್ದಾಣದಲ್ಲಿ ರೈಲುಗಳಿಗೆ ನೀರು ಒದಗಿಸುವ ವ್ಯವಸ್ಥೆ ಮಾಡಲು ಕೊಂಕಣ ರೈಲ್ವೆ ಜತೆ ಮಾತನಾಡಲಾಗಿದೆ. ಜಿಲ್ಲಾಡಳಿತ ನೀರು ಒದಗಿಸಲು ಕ್ರಮ ವಹಿಸಬೇಕು. ಎಂದರು.
ಸಮನ್ವಯದಿಂದ ಕಾರ್ಯ ನಿರ್ವಹಿಸಿ
ಅಽಕಾರಿಗಳು ಸಮನ್ವಯದ ಕಾರಣ ಸಣ್ಣ ಸಮಸ್ಯೆಗಳು ಸದನದಲ್ಲಿ ಚರ್ಚೆಯಾಗುವಂತಾಗುತ್ತದೆ. ಬಿಎಸ್‌ಎನ್‌ಎಲ್ ಟವರ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ನೆಟ್ವರ್ಕ್ ಇಲ್ಲದೇ ಜನ ಪರದಾಡುತ್ತಿದ್ದಾರೆ. ಪತ್ರ ವ್ಯವಹಾರ ಮಾಡುವ ಜತೆಗೆ ಇಬ್ಬರು ಅಽಕಾರಿಗಳು ಕುಳಿತು ಮಾತನಾಡುವುದರಿಂದ ನಿಮ್ಮ ಗೌರವಕ್ಕೇನೂ ಧಕ್ಕೆಯಾಗುವುದಿಲ್ಲ ಎಂದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಷ್ಮಾ ಗೋಡಬೋಲೆ, ಜಿಲ್ಲಾ ಽಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಡಾ.ದಿಲೀಶ್ ಶಶಿ ವೇದಿಕೆಯಲ್ಲಿದ್ದರು.