ಮೋದಿ ಬೆಂಬಲಿಸಿ ಪ್ರಜಾ ಪ್ರಭುತ್ವ ರಕ್ಷಣೆ ಮಾಡಿದ ಮತದಾರ

Bjp program
Published on

ಅಂಕೋಲಾ:ನಮ್ಮ ದೇಶದ ಮತದಾರರು ಪ್ರಬುದ್ಧ ಮತದಾರರಾಗಿದ್ದು ಮೋದಿ ನೇತೃತ್ವದ ಬಿಜೆಪಿಯನ್ನು ಬೆಂಬಲಿಸಿ ಪ್ರಜಾಪ್ರಭುತ್ವ ರಕ್ಷಣೆಗೆ ಮುಂದಾಗಿದ್ದಾರೆ. ಜಿಲ್ಲೆಯ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾರರು ನನಗೆ ಲೀಡ್ ಕೊಡುವ ಮೂಲಕ ಸಂಸದರಾಗಿ ಮಾಡಿದ್ದು, ಇದಕ್ಕೆಲ್ಲಾ ಕಾರ್ಯಕರ್ತರ ಶ್ರಮವೇ ಕಾರ ಣವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಇಲ್ಲಿನ ಹಾಲಕ್ಕಿ ಸಮುದಾಯ ಭವನದಲ್ಲಿ ಸೋಮವಾರ ಬಿಜೆಪಿ ಮಂಡಳದ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಅಂಕೋಲಾದಲ್ಲಿಯೇ 26 ಸಾವಿರಕ್ಕೂ ಹೆಚ್ಚು ಮತ ನೀಡಿ ಮತದಾರರು ಗೆಲ್ಲಿಸಿದ್ದಾರೆ, ಇದು ನನಗೆ ಹೆಮ್ಮಯ ವಿಷಯವಾಗಿದೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಅನೇಕ ಕಾರ್ಯಕರ್ತರು ಶ್ರಮಿಸಿದ್ದಾರೆ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಕಾರ್ಯಕರ್ತರು ಮನೆ ಮನೆಗೆ ತೆರಳಿ ಅದ್ಬುತವಾದ ಮತವನ್ನು ಪಡೆಯಲಿಕ್ಕೆ ಕಾರಣಕರ್ತರಾಗಿದ್ದಾರೆ. ನನ್ನ 20 ವರ್ಷ ರಾಜಕೀಯ ಜೀವನದಲ್ಲಿ ಅನೇಕ ರಾಜಕಾರಣಿಗರನ್ನು ನೋಡಿದ್ದೇನೆ. ಅವರಲ್ಲಿ ವಿಶೇಷರಾದವರು ನಮ್ಮ ಸಂಸದ ಕಾಗೇರಿಯವರು. ಸತತ 6ನೇ ಬಾರಿ ಶಾಸಕರಾಗಿ ಆಯ್ಕೆಯಾಗಿ, ಯಾವುದೇ ಭ್ರಷ್ಟಾಚಾರ ಮಾಡ ದೇ ತಮ್ಮ ರಾಜಕೀಯ ಜೀವನ ಕಳೆದಿದ್ದಾರೆ ಎಂದರು. ಕೇಂದ್ರ ಸಚಿವ ಶ್ರೀಪಾದ ನಾಯಕ ಮಾತನಾ ಡಿದರು.
ಜಿಲ್ಲಾ ಓಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ರಾಜೇಂದ್ರ ನಾಯ್ಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ಕೇ. ನಾರ್ವೇಕರ್, ಜಿಪಂ.ಮಾಜಿ ಸದಸ್ಯ ಜಗದೀಶ ನಾಯಕ ಮೊಗಟಾ, ಹಿರಿಯ ನ್ಯಾಯವಾದಿ ನಾಗರಾಜ ನಾಯಕ, ಪ್ರಮುಖರಾದ ಡಾ.ಜಿ.ಜಿ.ಹೆಗಡೆ, ಬಿಜೆಪಿ ಮಂಡಳದ ಮಾಜಿ ಅಧ್ಯಕ್ಷ ಸಂಜಯ ನಾಯ್ಕ, ಪ್ರಧಾನ ಕಾರ್ಯದರ್ಶಿ ಚಂದ್ರಕಾAತ ನಾಯ್ಕ, ಜೆಡಿಎಸ್ ತಾಲೂಕಾಧ್ಯಕ್ಷ ಸಂದೀಪ ಜಿ.ಬಂಟ, ಉಪಾಧ್ಯಕ್ಷ ಜಯೇಶ ನಾಯ್ಕ, ಪ್ರಮುಖರಾದ ಮೋಹಿನಿ ನಾಯ್ಕ, ಉಮೇಶ ಚೌಡನಕರ್, ನಾಗೇಶ ಶೆಡಿಕುಳ್ಳಿ, ಸೇರಿ ದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net