

ಮಾಂಜರಿ: ಚಿಕ್ಕೋಡಿ- ಶಿರಗುಪ್ಪಿ ಮಾರ್ಗದ ಮಾಂಜರಿ ಬಳಿ ಕಾಗವಾಡ ತಹಸೀಲ್ದಾರ್ ಪ್ರಮೀಳಾ ದೇಶಪಾಂಡೆ ಅವರ ಖಾಸಗಿ ವಾಹನಕ್ಕೆ ಅಥಣಿ ತಾಲೂಕಿನ ಐಗಳಿ ಪೊಲೀಸ್ ಠಾಣೆ ಪೇದೆಯ ಬೈಕ್ ಡಿಕ್ಕಿ ಹೊಡೆದ ಘಟನೆ ಭಾನುವಾರ ನಡೆದಿದೆ.
ಘಟನೆಯಲ್ಲಿ ಪೇದೆ ಶಿವಾನಂದ ಪಾಟೀಲ ಅವರಿಗೆ ಗಂಭೀರ ಗಾಯವಾ ಗಿದೆ. ಡಿಕ್ಕಿಯ ರಭಸಕ್ಕೆ ತಹಸೀಲ್ದಾರ್‌ಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಪೇದೆಯನ್ನು ಚಿಕ್ಕೋಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಗವಾಡ ತಹಸೀಲ್ದಾರ್ ಖಾಸಗಿ ವಾಹನದ ಮೂಲಕ ಚಿಕ್ಕೋಡಿ ಯಿಂದ ಕಾಗವಾಡಕ್ಕೆ ಬರುವಾಗ ಈ ಅವಘಡ ನಡೆದಿದೆ. ಅಂಕಲಿ ಪೊಲೀಸ್ ಠಾಣೆಯ ಪಿಎಸ್‌ಐ ಲಕ್ಷ್ಮಣಪ್ಪ ಆರಿ, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.