ಫೆ.10ಕ್ಕೆ ಕಡೂರು ತಾಲೂಕು ಮಟ್ಟದ ತೃತೀಯ ಜಾನಪದ ಸಮ್ಮೇಳನ

29KDR3
ಅಜ್ಜಂಪುರದ ಗಡಿಹಳ್ಳಿ ಗ್ರಾಮದಲ್ಲಿ ನಡೆಯುವ ಜಾನಪದ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರಾದ ಟಿ.ನಿಂಗಪ್ಪ ಅವರನ್ನು ಆಹ್ವಾನಿಸಲಾಯಿತು. ಜಿ.ಬಿ.ಸುರೇಶ್, ಡಾ.ಮಾಳೇನಹಳ್ಳಿ ಬಸಪ್ಪ, ಮರುಳಸಿದ್ದಪ್ಪ, ಲಕ್ಷ್ಮೀದೇವಮ್ಮ, ತಿಮ್ಮಯ್ಯ ಮತ್ತಿತರಿದ್ದರು.
Published on

ಕಡೂರು: ಅಜ್ಜಂಪುರ ತಾಲೂಕಿನ ಗಡಿಹಳ್ಳಿ ಗ್ರಾಮದಲ್ಲಿ ೆ.10ರಂದು ತಾಲೂಕು ಮಟ್ಟದ ತೃತೀಯ ಜಾನಪದ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ತಿಳಿಸಿದರು.
ಅಜ್ಜಂಪುರ ತಾಲೂಕಿನ ಗಡಿಹಳ್ಳಿ ಗ್ರಾಮದಲ್ಲಿ ಭಾನುವಾರ ತಾಲೂಕು ಘಟಕದಿಂದ ಜಾನಪದ ಸಮ್ಮೇಳನಾಧ್ಯಕ್ಷ, ಜಾನಪದ ಕಲಾವಿದರಾದ ಟಿ.ನಿಂಗಪ್ಪ ದಂಪತಿಯನ್ನು ಸಮ್ಮೇಳನಕ್ಕೆ ಆಹ್ವಾನ ನೀಡಿ ಮಾತನಾಡಿ, ಗಡಿಹಳ್ಳಿ ಗ್ರಾಮದಲ್ಲಿ ಪ್ರತಿ ಮನೆಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಹಿರಿಯ ಕಲಾವಿದರಾದ ಟಿ.ನಿಂಗಪ್ಪ ಅವರು ಜಾನಪದ ಹಾಡು, ನಾಟಕ ಇನ್ನಿತರ ಕಲೆಗಳಲ್ಲಿ ತೊಡಗಿಸಿಕೊಂಡು ಇಂದಿಗೂ ಜಾನಪದದಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ವೇದಿಕೆಗಳ ಮೂಲಕ ಸಾಹಿತ್ಯ, ಒಗಟು, ಗಾದೆ, ಜಾನಪದ ಹಾಡುಗಳ ಕಾರ್ಯಕ್ರಮ ನೀಡಿದ್ದಾರೆ. ಜನಪದ ಸಂಸ್ಕೃತಿ, ಕಲೆ, ಸಾಹಿತ್ಯದ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ನೇತೃತ್ವದಲ್ಲಿ ಅರ್ಥ ಪೂರ್ಣ ಸಮ್ಮೇಳನ ಆಯೋಜಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ತಾಲೂಕು ಘಟಕದ ಗೌರವಾಧ್ಯಕ್ಷ ಮರಳುಸಿದ್ದಪ್ಪ ಗ್ರಾಪಂ ಅಧ್ಯಕ್ಷ ತಿಮ್ಮಯ್ಯ, ಮುಗಳಿ ಲಕ್ಷ್ಮೀದೇವಮ್ಮ, ಮುಖಂಡ ಪರಮೇಶ್ವರಪ್ಪ, ಮಂಜಪ್ಪ, ಬಸವಪುರ ಅಣ್ಣಯ್ಯ ನಾರಾಯಣಪುರ ರಾಜಣ್ಣ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net