

ಕಡೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರಾಗಿ ಬೀರೂರು ಎನ್. ಗಿರೀಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಆರ್.ದೇವರಾಜ್ ಅವಿರೋಧವಾಗಿ ಆಯ್ಕೆಯಾದರು.
ಪ್ರವಾಸಿ ಮಂದಿರದಲ್ಲಿ ಭಾನುವಾರ ಸಂಘದ ಜಿಲ್ಲಾಧ್ಯಕ್ಷ ಟಿ.ಎನ್.ಎ.ಮೊದಲಿಯಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರ ಸಹಮತದೊಂದಿಗೆ ಆಯ್ಕೆ ನಡೆಸಲಾಯಿತು. ಜಿಲ್ಲಾ ಸಂಘದ ಕಾರ್ಯದರ್ಶಿಯಾಗಿ ಹಿರೇನಲ್ಲೂರು ಶಿವು ಅವರನ್ನು ನೇಮಕ ಮಾಡಿರುವುದಾಗಿ ಟಿ.ಎನ್.ಎ.ಮೊದಲಿಯಾರ್ ತಿಳಿಸಿದರು.
ಸಂಘದ ಖಜಾಂಚಿಯಾಗಿ ಹುಲ್ಲೇಹಳ್ಳಿ ಲಕ್ಷ್ಮಣ್ ಆಯ್ಕೆಯಾದರು. ಹಿರಿಯ ಸದಸ್ಯರಾದ ಎಚ್.ಎಸ್.ರಮೇಶ್, ಸಿ.ಕೆ.ಮೂರ್ತಿ, ಎಸ್.ಸುಬ್ರಹ್ಮಣ್ಯ, ಕೆ.ಜಿ.ಲೋಕೇಶ್ವರ್, ಟಿ.ಆರ್.ಭೈರೇಶ್, ಬಿ.ಆರ್.ನಾಗರಾಜ್, ಎಚ್.ಜಗದೀಶ್, ಹುಲ್ಲೇಹಳ್ಳಿ ಲಕ್ಷ್ಮಣ್, ಬಿ.ಟಿ. ಚಂದ್ರಶೇಖರ್, ಭಾನುಮೂರ್ತಿ ಇತರರಿದ್ದರು.