ರೈತರಿಗೆ ಸಾಗುವಳಿ ಪತ್ರ ನೀಡದ ಬಿಜೆಪಿ ಸರ್ಕಾರ

web 3
Published on

ಕಡೂರು: ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈತರಿಗೆ ಸಾಗುವಳಿ ಪತ್ರ ನೀಡುವಂತೆ ಆದೇಶಿಸಿದ್ದರೂ ಈಗಿನ ಬಿಜೆಪಿ ಸರ್ಕಾರ ಸಾಗುವಳಿ ಪತ್ರ ನೀಡುತ್ತಿಲ್ಲ ಎಂದು ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್ ಆರೋಪಿಸಿದರು.

ಮದಗದಕೆರೆಗೆ ಕಡೂರು ಮತ್ತು ಬೀರೂರು ಬ್ಲಾಕ್ ಕಾಂಗ್ರೆಸ್​ನಿಂದ ಪಕ್ಷದ ಮುಖಂಡರು ಮತ್ತು ಜನಪ್ರತಿನಿಧಿಗಳೊಂದಿಗೆ ಬಾಗಿನ ಸಮರ್ಪಿಸಿ ಮಾತನಾಡಿ, ಕಾಗೋಡು ತಿಮ್ಮಪ್ಪ ಸಚಿವರಾಗಿದ್ದ ಅವಧಿಯಲ್ಲಿ ತಾಲೂಕಿನ ಕೆಲವೇ ರೈತರಿಗೆ ಸಾಗುವಳಿ ಪತ್ರ ನೀಡಲಾಗಿದೆ ಎಂದರು.

ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ 100 ಕೋಟಿ ರೂ. ವೆಚ್ಚದ ಹೆಬ್ಬೆ ಯೋಜನೆ ಜಾರಿಗೆ ತರುವ ಪ್ರಯತ್ನ ನಡೆದು ತಾಂತ್ರಿಕ ಕಾರಣದಿಂದ ನನೆಗುದಿಗೆ ಬಿತ್ತು ಎಂದು ಹೇಳಿದರು.

ಜಿಪಂ ಸದಸ್ಯೆ ಲೋಲಾಕ್ಷಿಬಾಯಿ ಮಾತನಾಡಿ, ಮದಗದಕೆರೆ ಆವರಣದಲ್ಲಿ ಪ್ರವಾಸಿ ಮಂದಿರದ ಅವಶ್ಯಕತೆ ಇದೆ. ಆನಂದ್ ಅವರು ಶಾಸಕರಾದಲ್ಲಿ ಮೊದಲ ಕೆಲಸವಾಗಿ ಎಮ್ಮೆದೊಡ್ಡಿ ಭಾಗದ ರೈತರ ಸಮಸ್ಯೆಗಳನ್ನು ಬಗೆಹರಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net