ಕಾಡುಕೋಣ ಇರಿದು ಗಂಭೀರ ಗಾಯ

kls kk
ಕಾಡುಕೋಣ ಇರಿದು ಗಾಯಗೊಂಡಿದ್ದ ಮರಿಗೌಡ ಅವರಿಗೆ ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡುತ್ತಿರುವುದು.
Published on

ಕಳಸ: ತಾಲೂಕಿನ ಮುಜೆಕಾನು ಗ್ರಾಮದಿಂದ ಕಳಸಕ್ಕೆ ಬರುತ್ತಿದ್ದ ಕೃಷಿಕನಿಗೆ ಕಾಡುಕೋಣ ಇರಿದು ಗಂಭೀರ ಗಾಯಗಳಾಗಿವೆ.

ಮುಜೆಕಾನು ಗ್ರಾಮದ ಮರಿಗೌಡ (60) ಗಾಯಗೊಂಡವರು.
ಮರಿಗೌಡ ಶನಿವಾರ ಕರ‌್ನಾಳಿ ಸಮೀಪ ಹೋಗುತ್ತಿದ್ದಾಗ ಕಾಡುಕೋಣ ಕಂಡುಬಂದಿದೆ. ಕಾಡು ಕೋಣಕ್ಕೆ ಕಾಣಿಸಬಾರದೆಂದು ಮಲಗಿದ್ದಾರೆ. ಆದರೂ ಅಲ್ಲಿಗೆ ಬಂದ ಕಾಡುಕೋಣ ಮರಿಗೌಡ ಅವರ ಎದೆಗೆ ಕೋಡಿನಿಂದ ಇರಿದು ದೂರಕ್ಕೆ ಎಸೆದಿದೆ. ಇದರಿಂದ ತೀವ್ರವಾಗಿ ರಕ್ತಸ್ರಾವ ಆಗಿದ್ದು ರಸ್ತೆಯಲ್ಲಿ ನರಳುತ್ತಿದ್ದರು. ಸಮೀಪದಲ್ಲಿ ಇದ್ದ ಸ್ಥಳೀಯರು ಅವರನ್ನು ಕಳಸಕ್ಕೆ ಕರೆತಂದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದರು. ನಂತರ ಮಂಗಳೂರಿಗೆ ಕರೆದೊಯ್ಯಲಾಗಿದೆ. ಶ್ವಾಸಕೋಶಕ್ಕೆ ಗಂಭೀರ ಗಾಯಗಳಾಗಿವೆ. ಗಾಯದ ತೀವ್ರತೆಗೆ ಹೃದಯ ಕಾಣುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net