

ಸಿದ್ದಾಪುರ: ತಾಲೂಕಿನ ಗವಿನಗುಡ್ಡದಲ್ಲಿ ಕಾಡುಕೋಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಅರಣ್ಯ ಇಲಾಖೆಯವರು ಒಬ್ಬನನ್ನು ಬುಧವಾರ ಬಂಧಿಸಿದ್ದಾರೆ.
ಶಿರಸಿ ತಾಲೂಕಿನ ಹೆಗಡೆಕಟ್ಟಾದ ಯುಸೂಫ್‌ಸಾಬ್ ಅಬ್ದುಲ್ ಕರಿಮಸಾಬ್ ಬಂಧಿತ ಆರೋಪಿ. ಆರೋಪಿ ಮನೆಯಲ್ಲಿ ಮಾಂಸ ಪತ್ತೆಯಾಗಿದೆ. ಮಾಂಸ ಒಯ್ಯಲು ಬಳಸಿದ್ದ ಮಹಿಂದ್ರ ಪಿಕ್‌ಅಪ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ 7ಕ್ಕೂ ಹೆಚ್ಚು ಜನ ಶಾಮೀಲಾಗಿರುವುದಾಗಿ ತಿಳಿದುಬಂದಿದೆ. ಆರೋಪಿಗಳ ಶೋಧ ಕಾರ್ಯ ನಡೆದಿದೆ.
ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ನೇತೃತ್ವದಲ್ಲಿ ಎಸಿಎಫ್ ಪ್ರವೀಣ ಬಸ್ರೂರು ಅವರ ಮಾರ್ಗದರ್ಶನದಲ್ಲಿ ಸಿದ್ದಾಪುರ ಆರ್‌ಎಫ್‌ಒ ಅಜಯಕುಮಾರ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.