ಪಟ್ಟಣದ ಸಮೀಪಕ್ಕೆ ಬಂದ ಕಾಡುಕೋಣ

Wild Buffello
Published on

ಮುಂಡಗೋಡ: ತಾಲೂಕಿನ ಸನವಳ್ಳಿ ಜಲಾಶಯದ ಬಳಿ ಮುಂಡಗೋಡ ಬಂಕಾಪುರ ರಾಜ್ಯ ಹೆದ್ದಾರಿ ಪಕ್ಕದಲ್ಲಿನ ಅರಣ್ಯದಲ್ಲಿ ಎರಡು ಕಾಡು ಕೋಣಗಳು ಪ್ರತ್ಯಕ್ಷವಾಗಿ ಆತಂಕ ಮೂಡಿಸಿದೆ.

ಪಟ್ಟಣದ ಸುಭಾಷ್ ನಗರದ ವ್ಯಕ್ತಿಯೊಬ್ಬರು ಬೈಕ್ ಮೇಲೆ ಮುಂಡಗೋಡನಿಂದ ಶಿಗ್ಗಾಂವಿಗೆ ತೆರಳುತ್ತಿರುವಾಗ ಸನವಳ್ಳಿ ಜಲಾಶಯದ ಬಳಿ ರಸ್ತೆಯ ಮೇಲೆ ಎರಡು ಕಾಡು ಕೋಣಗಳು ಕಂಡಿವೆ.

ತಾಲೂಕಿನ ಮಳಗಿ ಬೆಡಸಗಾಂವ ಭಾಗದಲ್ಲಿ ಮಾತ್ರ ಕಾಡು ಕೋಣಗಳು ಕಂಡು ಬರುತ್ತಿದ್ದವು ಆದರೆ ಈಗ ಪಟ್ಟಣದಿಂದ ನಾಲ್ಕು ಕಿಮೀ ಅಂತರದ ಸನವಳ್ಳಿ ಜಲಾಶಯದ ಬಳಿ ಕಂಡು ಬಂದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net