ವಸತಿ ಸಮುಚ್ಚಯಕ್ಕೆ ನುಗ್ಗಿದ ಯುವಕ ಪೊಲೀಸ್ ವಶಕ್ಕೆ

mng--10 march bejai arrest
Published on


ಮಂಗಳೂರು: ನಗರದ ಸರ್ಕೀಟ್‌ಹೌಸ್‌ನಿಂದ ಕದ್ರಿ ಕಂಬಳದ ಕಡೆಗೆ ಹೋಗುವಲ್ಲಿ ಇರುವ ವಸತಿ ಸಮುಚ್ಚಯ ಪ್ರದೇಶಕ್ಕೆ ಅಪರಿಚಿತ ಯುವಕನೊಬ್ಬ ಪ್ರವೇಶ ಮಾಡಿ ಸುತ್ತಾಡುತ್ತಿದ್ದ ಬಗ್ಗೆ ದೂರಿನ ಹಿನ್ನಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ತಲಪಾಡಿ ನಿವಾಸಿ ತೌಸಿಂ (19) ವಶಕ್ಕೆ ಪಡೆಯಾದ ಆರೋಪಿ.
ಈತ ಶುಕ್ರವಾರ ಸಂಜೆ ವೇಳೆ ಅಪಾರ್ಟ್‌ಮೆಂಟ್ ಪ್ರದೇಶಕ್ಕೆ ಏಕಾಏಕಿ ನುಗ್ಗಿ, ಕಾರು ಪಾರ್ಕಿಂಗ್ ಸ್ಥಳದಲ್ಲಿ ತಿರುಗಾಡುತ್ತಿದ್ದ. ಇದನ್ನು ಗಮನಿಸಿದ ಅಸೋಸಿಯೇಶನ್ ಅಧ್ಯಕ್ಷ ರೋಹನ್ ಆತನನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ಕೆಲವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲಿದ್ದವರು ಕದ್ರಿ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net