

ಮಂಗಳೂರು: ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯಿಂದ 2008ರ ನ.26ರ ಮುಂಬಯಿ ದಾಳಿಯ ಹುತಾತ್ಮ ಸೈನಿಕರು ಮತ್ತು ಅಮಾಯಕರಿಗೆ ರಾಷ್ಟ್ರಜಾಗೃತಿಯ ಭಾವಪೂರ್ಣ ಅಸುವು ರಾಷ್ಟ್ರ ಸಮರ್ಪಿತ ಕಾರ್ಯಕ್ರಮವು ಕದ್ರಿ ಯುದ್ಧ ಸ್ಮಾರಕದಲ್ಲಿ ಭಾನುವಾರ ನಡೆಯಿತು.
ಸಂತ ಆ್ಯಗ್ನೇಸ್ ಕಾಲೇಜಿನ ಪ್ರಿನ್ಸಿಪಾಲ್ ಡಾ.ವೆನಿಸ್ಸ ಕಾರ್ಯಕ್ರಮ ಉದ್ಘಾಟಿಸಿದರು. ಕೋಸ್ಟ್ ಗಾರ್ಡ್ ಡಿಐಜಿ ಪಿ.ಕೆ.ಮಿಶ್ರಾ ಅಧ್ಯಕ್ಷತೆ ವಹಿಸಿದ್ದರು. ಎಸಿಪಿ ಗೀತಾ ಕುಲಕರ್ಣಿ ನುಡಿನಮನ ಸಲ್ಲಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ.ವಿ., ಸೈಂಟ್ ಅಲೋಶಿಯಸ್ ಕಾಲೇಜಿನ ಚಿನ್ನದ ಪದಕ ವಿಜೇತ ಎನ್‌ಸಿಸಿ ಕೆಡೆಟ್ ಆಶ್ನಾ ರೈ, ದ.ಕನ್ನಡ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ಬಾಳ, ಮಂಗಳೂರು ಕ್ಯಾಥೋಲಿಕ್ ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಯ್ ಕ್ಯಾಸ್ಟಲಿನೊ, ಕ್ರೆಡಾಯ್ ಅಧ್ಯಕ್ಷ ವಿನೋದ್ ಎ.ಆರ್.ಪಿಂಟೊ, ಉದ್ಯಮಿ ಪ್ರಶಾಂತ್ ಕುಮಾರ್ ಸನಿಲ್, ನ್ಯಾಯವಾದಿ ಬಿ.ನಯನಾ ಪೈ, ಕಾರ್ಪೊರೇಟರ್ ಶಕಿಲಾ ಕಾವ, ಕದ್ರಿ ನೃತ್ಯ ಭಾರತಿಯ ಸ್ಥಾಪಕಿ ಗೀತಾ ಸರಳಾಯ ಅತಿಥಿಗಳಾಗಿದ್ದರು.
ವಿದುಷಿ ರಶ್ಮಿ ಚಿದಾನಂದ ಅವರ ನಿರ್ದೇಶದಲ್ಲಿ ನೃತ್ಯ ಭಾರತಿಯ ವಿದ್ಯಾರ್ಥಿನಿಯರಿಂದ ಹುತಾತ್ಮ ಸೈನಿಕರಿಗೆ ನೃತ್ಯನಮನ ಕಾರ್ಯಕ್ರಮ ನಡೆಯಿತು. ಎನ್‌ಸಿಸಿ, ಏರ್‌ವಿಂಗ್, ಆರ್ಮಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಕೋಸ್ಟ್ ಗಾರ್ಡ್ ಸಿಬ್ಬಂದಿ ಭಾಗವಹಿಸಿ, ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದರು.
ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಸ್ಥಾಪಕ ್ರಾಂಕ್ಲಿನ್ ಮೊಂತೆರೊ ಸ್ವಾಗತಿಸಿದರು. ಅರುಣ್ ಶೇಟ್ ಕಾರ್ಯಕ್ರಮ ನಿರೂಪಿಸಿದರು.