

ಮಂಗಳೂರು : ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವ ಕದ್ರಿ ಕ್ರಿಕೆಟರ್ಸ್ ಸಂಸ್ಥೆಯ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಅಂಗವಾಗಿ 14ನೇ ವರ್ಷದ ಕದ್ರಿ ಸ್ಟಾರ್ ನೈಟ್ ಸಂಗೀತ ರಸ ಸಂಜೆ ಕಾರ್ಯಕ್ರಮ ಸೆ.7ರಂದು
ಸಾಯಂಕಾಕ 7ಕ್ಕೆ ನಗರದ ಕದ್ರಿ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಮನೋಹರ್ ಶೆಟ್ಟಿ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟಾರ್ ನೈಟ್ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನಲೆ ಗಾಯಕ ಕುನಾಲ್ ಗಾಂಜಾವಾಲ್, ನಟ ರಕ್ಷಿತ್ ಶೆಟ್ಟಿ, ನಟಿ ರುಕ್ಮಿಣಿ ವಸಂತ, ಸಂಗೀತ ನಿರ್ದೇಶಕರಾದ ಅನುಪ್ ಸಿಲಿನ್, ಮಣಿಕಾಂತ್ ಕದ್ರಿ,
ಡಾ. ಕಿರಣ್ ತೊಟ್ಟಂಬೈಲ್, ಹಿನ್ನಲೆ ಗಾಯಕರಾದ ವಸುಶ್ರೀ ಹಳೆಮನೆ, ಕರಿಬಸವ ತಡಕಲ್, ತನುಶ್ರೀ ಮುಂತಾದವರು
ಭಾಗವಹಿಸಲಿದ್ದಾರೆ ಎಂದರು.
ಇದೇ ಸಂದರ್ಭ ನಾಲ್ವರು ನಿವೃತ್ತ ಸೈನಿಕರನ್ನು ಸನ್ಮಾನಿಸಲಾಗುವುದು. ಹಿರಿಯ ಯಕ್ಷಗಾನ ಭಾಗವತ ಪುತ್ತಿಗೆ ರಘುರಾಮ ಹೊಳ್ಳರನ್ನು ಗೌರವಿಸಲಾಗುವುದು ಎಂದು ಅವರು ತಿಳಿಸಿದರು.
ಕದ್ರಿ ಕ್ರಿಕೆಟರ್ಸ್‌ನ ಉಪಾಧ್ಯಕ್ಷ ಹೇಮಾನಂದ್ ಕೊಡಿಯಾಲ್‌ಬೈಲ್, ಕಾರ್ಯದರ್ಶಿ ರಾಘವೇಂದ್ರ ಬರ್ವತ್ತಾಯ, ಸದಸ್ಯ ಚೇತನ್ ಶಶಾಂಕ್, ಸುಜಿತ್ ಸಾಲ್ಯಾನ್, ಶರಣ್, ಅವಿನಾಶ್ ಕದ್ರಿ, ತಾರನಾಥ್ ಶೆಟ್ಟಿ, ಜಗದೀಶ್ ಕದ್ರಿ, ಸಹನ್ ಕದ್ರಿ, ಸಚಿನ್ ಕದ್ರಿ, ಶರಣ್ ರೈ, ಸುಜಿತ್ ಸಾಲ್ಯಾನ್, ಅವಿನಾಶ್ ರೈ ಉಪಸ್ಥಿತರಿದ್ದರು.