

ಮಂಗಳೂರು: ಉಪನಯನ ಸಂಸ್ಕಾರದಿಂದ ಜೀವನ ಪಾವನವಾಗುತ್ತದೆ. ತನ್ಮೂಲಕ ದ್ರಾವಿಡ ಬ್ರಾಹ್ಮಣ ವಟುಗಳಿಗೆ ಮೌಲ್ಯಾಧಾರಿತ ಜೀವನವನ್ನು ಸಂಸ್ಕಾರದೊಂದಿಗೆ ನಡೆಸಲು ಸಾಧ್ಯ ಎಂದು ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಕದ್ರಿ ಮಲ್ಲಿಕಟ್ಟೆ ಶ್ರೀ ಕೃಷ್ಣ ಕಲ್ಯಾಣ ಮಂದಿರದಲ್ಲಿ ಭಾನುವಾರ ಶ್ರೀ ಕೃಷ್ಣ ಧರ್ಮೋಪನಯನ ಸಮಿತಿಯ ವತಿಯಿಂದ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರ ಸಂಸ್ಮರಣೆಯೊಂದಿಗೆ ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರ ಆಶೀರ್ವಾದ ಹಾಗೂ ಮಾರ್ಗದರ್ಶನದೊಂದಿಗೆ ದ್ರಾವಿಡ ಬ್ರಾಹ್ಮಣ ವಟುಗಳಿಗೆ ಶಾಸ್ತ್ರೋಕ್ತವಾಗಿ ಜರಗಿದ ಧರ್ಮೋಪನಯನ ಕಾರ್ಯಕ್ರಮದಲ್ಲಿ ವಟುಗಳಿಗೆ ಉಪನಯನ ಸಂಸ್ಕಾರದ ಕುರಿತು ಉಪನ್ಯಾಸ ನೀಡಿದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಡಾ.ಐ.ಜಿ ಭಟ್, ಯಕ್ಷಗಾನ ವಿಧ್ವಾಂಸ ಡಾ.ಎಂ. ಪ್ರಭಾಕರ ಜೋಶಿ, ಕರ್ಣಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ಸುಮನ ಘಾಟೆ ಪಾವಂಜೆ, ಜಯಂತ್ ಭಟ್, ಮಧುಸೂಧನ ಆಚಾರ್ ಕಣ್ಮ ತೀರ್ಥ, ವಿಪ್ರಸಮಾಗಮ ವೇದಿಕೆಯ ಪಿ.ರಾಮಕೃಷ್ಣರಾವ್, ಪೂರ್ಣಿಮಾ ರಾವ್ ಪೇಜಾವರ, ಸುಚೇತ ಜೋಶಿ, ಶುಭ ಜಯರಾಮ ಭಟ್ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡದ್ರಾವಿಡ ಬ್ರಾಹ್ಮಣರ ಅಸೋಸಿಯೇಷನ್ ಅಧ್ಯಕ್ಷರಾದ ಪ್ರಭಾಕರ ರಾವ್ ಪೇಜಾವರ, ಶೋಭಾ ರಾವ್ ಪೇಜಾವರ, ಸದಾನಂದ ರಾವ್ ಪೇಜಾವರ, ಕೃಷ್ಣಮೂರ್ತಿ ಉಡು, ಪ್ರಸಾದ ಕುಲಕರ್ಣಿ, ರಾಘವೇಂದ್ರ ಕಾಮತ್, ಸುಧಾಕರ ಭಟ್ ಸಹಕರಿಸಿದರು. ಶ್ರೀ ಕೃಷ್ಣ ಧರ್ಮೋಪನಯನ ಸಮಿತಿಯ ಕಾರ್ಯಾಧ್ಯಕ್ಷ ಸುಧಾಕರ ರಾವ್ ಪೇಜಾವರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವಾಸುದೇವ ರಾವ್ ಕುಡುಪು ವಂದಿಸಿದರು.