

ಮಂಗಳೂರು: ಯಕ್ಷ ಶಿಕ್ಷಣ ದೊರೆತಾಗ ಮಕ್ಕಳಲ್ಲಿ ವಿಶೇಷ ಚೈತನ್ಯ ಮೂಡಿ ಸಮಾಜಮುಖೀ ಕಾರ್ಯಗಳನ್ನು ಮಾಡಲು ಅವರನ್ನು ಸಶಕ್ತಗೊಳಿಸುತ್ತದೆ ಎಂದು ವಿದ್ಯಾರತ್ನ ಸಂಸ್ಥೆಗಳ ಅಧ್ಯಕ್ಷ ಉಳಿದೊಟ್ಟು ರವೀಂದ್ರ ಶೆಟ್ಟಿ ಹೇಳಿದರು.
ಕದ್ರಿಯಲ್ಲಿ ನಡೆದ ಸರಯೂ ಮಕ್ಕಳ ಮೇಳದ ಸಪ್ತಾಹ ಉದ್ಘಾಟಿಸಿ,ಅವರು ಮಾತನಾಡಿದರು.
ಅಲೆವೂರಾಯರಂತಹ ಯಕ್ಷಗುರುಗಳು ಶಾಲಾ/ಕಾಲೇಜುಗಳಲ್ಲಿ ನಾಟ್ಯ ತರಗತಿಗಳನ್ನು ನಡೆಸಿ ಹವ್ಯಾಸಿಗಳನ್ನೂ ವ್ಯವಸಾಯಿಗಳ ಹಂತವನ್ನು ತಲುಪಿಸುತ್ತಾರೆ. ನಮ್ಮ ವಿದ್ಯಾರತ್ನ ಸಂಸ್ಥೆಗಳಲ್ಲೂ ಪಠ್ಯದ ಜೊತೆಗೆ ಯಕ್ಷಗಾನವನ್ನೂ ಕಲಿಸುತ್ತೇವೆ. ಅವರು ಪಠ್ಯ ಹಾಗೂ ಪಠ್ಯೇತರ ವಿಷಯಗಳಲ್ಲೂ ಮುಂದಿರುತ್ತಾರೆ ಎಂದವರು ಹೇಳಿದರು.
ಸಂಸ್ಥೆಯ ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಧಾಕರ ರಾವ್ ಪೇಜಾವರ್ ಚೇತನಾ ವಿಕಾಸ ಕೇಂದ್ರದ ಬಗ್ಗೆ ಅಭಿನಂದಿಸಿದರು. ಅಮ್ಮುಂಜೆ ಜನಾರ್ದನರು ಪಟ್ಲಗುತ್ತು ಮಹಾಬಲ ಶೆಟ್ಟರ ಬಗ್ಗೆ ಅಭಿನಂದನಾ ಮಾತುಗಳನ್ನಾಡಿದರು ಕದ್ರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಕುಸುಮಾ ದೇವಾಡಿಗರು ಸಂಸ್ಥೆಯ ಬೆಳವಣಿಗೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಸಂಸ್ಥೆಯ ಗೌರವ ಸಂಚಾಲಕರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ದಿವ್ಯಾಂಗ ಮಕ್ಕಳ ಶಾಲೆಯ ಚೇತನಾ ವಿಕಾಸ ಕೇಂದ್ರ ಶಾಲೆಯನ್ನು ಗೌರವಿಸಲಾಯಿತು.
ಯಕ್ಷಗಾನದ ಮೇಳದ ಯಜಮಾನರೂ, ಸಂಘಟಕರೂ ಆದ ಪಟ್ಲಗುತ್ತು ಮಹಾಬಲ ಶೆಟ್ಟಿಯವರನ್ನು ಯಕ್ಷ ಸರಯೂ ಬಿರುದಿತ್ತು ಸನ್ಮಾನಿಸಲಾಯಿತು. ಗಣರಾಜ್ ,ವರ್ಕಾಡಿ ಮಧುಸೂದನ ಅಲೆವೂರಾಯ, ಸಂತೋಷ್, ವರ್ಕಾಡಿ ಮಾಧವ ನಾವಡ, ಪ್ರಭಾಕರ ರಾವ್ ಪೇಜಾವರ, ಕೃಪಾ ಖಾರ್ವಿ, ಮನ್ವಿತ್ ಬಿ.ಶೆಟ್ಟಿ, ಕಾವ್ಯ, ಲಿಖಿತಾ, ಕೃತಿ, ನಿತ್ಯಶ್ರೀ ಉಪಸ್ಥಿತರಿದ್ದರು.
ಶೋಭಾ ಪೇಜಾವರ ವಂದಿಸಿದರು. ಆರಂಭದಲ್ಲಿ ಸರಯೂ ಸಂಸ್ಥೆ ಹಾಗೂ ಅತಿಥಿಗಳ ಕೂಡುವಿಕೆಯಿಂದ ಮೇಧಿನಿ ನಿರ್ಮಾಣ, ಸಭೆಯ ಬಳಿಕ ಮಹಿಷ ವಧೆ ಬಯಲಾಟ ನಡೆಯಿತು.