

ಮಂಗಳೂರು: ನಗರದ ಕುಲಶೇಖರದಲ್ಲಿರುವ ಕಿರಣ್ ಎಂಟರ್‌ಪ್ರೈಸಸ್ ಕಟ್ಟಡದಲ್ಲಿ ತನ್ನ ಇರುವಿಕೆಯನ್ನು ಮರೆ ಮಾಚಿ ಸಂಶಯಾಸ್ಪದ ರೀತಿಯಲ್ಲಿದ್ದ ಮೂಡುಶೆಡ್ಡೆಯ ದೀಪಕ್ (27) ಎಂಬಾತನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಕದ್ರಿ ಠಾಣೆ ಪಿಎಸ್‌ಐ ಚಂದ್ರಶೇಖರ ಅವರು ಬುಧವಾರ ಬೆಳಗ್ಗಿನ ಜಾವ ಗಸ್ತು ತಿರುಗುತ್ತಿದ್ದಾಗ ದೀಪಕ್ ಕಾಣಸಿಕ್ಕಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಮರ್ಪಕ ಉತ್ತರ ನೀಡದೇ ಇದ್ದುದರಿಂದ ರಾತ್ರಿ ವೇಳೆ ಯಾವುದೋ ದುಷ್ಕೃತ್ಯ ನಡೆಸಲು ಹೊಂಚು ಹಾಕುತ್ತಿರುವುದಾಗಿ ಸಂಶಯದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ.