

ಉಡುಪಿ: ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಶ್ರಯದಲ್ಲಿ ನಡೆಯುವ 57ನೇ ವರ್ಷದ ಗಣೇಶೋತ್ಸವ ಆಮಂತ್ರಣ ಪತ್ರಿಕೆಯನ್ನು ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸಮಾಜಸೇವಕ ಈಶ್ವರ್ ಮಲ್ಪೆ ಮತ್ತು ವಿಶು ಶೆಟ್ಟಿ ಅಂಬಲಪಾಡಿ ಮತ್ತು ನಗರಸಭೆಯ ಮಾಜಿ ಪೌರಾಯುಕ್ತ ಮಂಜುನಾಥಯ್ಯ ಬಿಡುಗಡೆಗೊಳಿಸಿದರು.
ಈ ಸಮಯದಲ್ಲಿ ಗಣೇಶೋತ್ಸವ ಸಮಿತಿಯ ಸಂಚಾಲಕ ಮಟ್ಟಾರ್ ಗಣೇಶ್ ಕಿಣಿ, ಪ್ರಧಾನ ಕಾರ್ಯದರ್ಶಿ ಕೆ ರಾಘವೇಂದ್ರ ಕಿಣಿ, ನಗರಸಭಾ ಸದಸ್ಯೆ ಗೀತಾ ಶೇಟ್, ಗಣೇಶೋತ್ಸವ ಸಮಿತಿ ಕಾರ್ಯದರ್ಶಿಗಳಾದ ಸಂತೋಷ್ ಕಿಣಿ ಮತ್ತು ಸತೀಶ್ ಕುಲಾಲ್ ಕಡಿಯಾಳಿ, ಗಣೇಶೋತ್ಸವ ಸಮಿತಿಯ ಉಪಾಧ್ಯೆ ಭಾರತಿ ಚಂದ್ರಶೇಖರ್, ಅನ್ನ ಸಂತರ್ಪಣೆ ಸಮಿತಿಯ ಸಂಚಾಲಕ ಮಂಜುನಾಥ್ ಹೆಬ್ಬಾರ್, ಗಣೇಶೋತ್ಸವ ಸಮಿತಿಯ ಆಮಂತ್ರಣ ಪತ್ರಿಕೆ ಸಂಚಾಲಕ ಜಯಂತ್ ಕುಂದರ್ ಮತ್ತು ಸಂದೀಪ್ ಸನಿಲ್, ಸಮಿತಿಯ ಪದಾಧಿಕಾರಿಗಳಾದ ಜೀವರತ್ನ ದೇವಾಡಿಗ, ಮಂಜುನಾಥ್ ರಾವ್, ಮುರುಳಿಧರ್ ಪೈ, ಹರಿಪ್ರಸಾದ್ ರಾವ್ ಕಡಿಯಾಳಿ, ಲೀಲಾ ಆರ್ ಅಮೀನ್, ವಸಂತಿ ರಾವ್ ಇನ್ನಿತರರು ಉಪಸ್ಥಿತರಿದ್ದರು.