ಹೊಸ ಪೀಳಿಗೆಗೆ ಸಂಸ್ಕಾರಯುತ ಶಿಕ್ಷಣ ಅಗತ್ಯ: ಅಣ್ಣಾಮಲೈ

udp-22-kadiyali 2
Published on

ಉಡುಪಿ: ಸ್ವಾಮೀ ವಿವೇಕಾನಂದರು ಹೇಳಿದಂತೆ ಪ್ರತಿ ಮಗುವಿನಲ್ಲೂ ಅಂತಃಸತ್ವವಿರುತ್ತದೆ. ಶಿಕ್ಷಣದ ಮೂಲಕ ಮಕ್ಕಳಲ್ಲಿರುವ ಬುದ್ಧಿಮತ್ತೆ ಮತ್ತು ಆಧ್ಯಾತ್ಮದ ಅರಿವು ಅನಾವರಣಗೊಳಿಸಬೇಕು ಎಂದು ತಮಿಳ್ನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.

ಸೋಮವಾರ ಕಡಿಯಾಳಿ ಇಂಗ್ಲೀಷ್ ಆಂಗ್ಲ ಮಾಧ್ಯಮ ಶಾಲೆ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಭಾರತದ ಸ್ವಾತಂತ್ರೃ ಶತಮಾನೋತ್ಸವ ವೇಳೆಗೆ (2047) ಹೊಸ ತಲೆಮಾರಿನ ಯುವಜನತೆ ಈ ಶಿಕ್ಷಣ ಸಂಸ್ಥೆಗಳ ಮೂಲಕ ಮೂಡಿಬರಬೇಕು ಎಂದರು. ಉಡುಪಿಗೆ ಬಂದು ಹೋದ ಬಳಿಕ ಹೊಸ ಚೈತನ್ಯ ಮೂಡುತ್ತದೆ. ಈ ಮಣ್ಣಿನಲ್ಲಿ ಅಂಥ ಗುಣವಿದೆ. ಒಂದೇ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶವಿದ್ದರೂ ನಾನು ಅದನ್ನು ಕಳೆದುಕೊಳ್ಳುವುದಿಲ್ಲ ಎಂದರು.

ಸೋದೆ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಸಂಸ್ಕಾರ ರಹಿತ ವಿದ್ಯೆ ಹಾಗೂ ವಿದ್ಯೆ ರಹಿತ ಸಂಸ್ಕಾರ ಎರಡೂ ವ್ಯರ್ಥ. ಹೀಗಾಗಿ ಸನಾತನ ಪರಂಪರೆಯ ಸತ್ವ, ಶ್ರೇಷ್ಟತೆಯ ಅರಿವು ನೀಡಿದರೆ ಪ್ರಜಾ ಸಂಪತ್ತು ಸಾರ್ಥಕ ಎಂದರು.

ರೋಟರಿ ಜಿಲ್ಲೆ 3182 ಗವರ್ನರ್ ಡಾ.ಜಯಗೌರಿ ಹಡಿಗಲ್, ಬೆಂಗಳೂರಿನ ಖಾಸಗಿ ಕಂಪೆನಿ ಹಿರಿಯ ಅಧಿಕಾರಿ ನಿರ್ಮಲಾ, ಕರ್ನಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ವಾದಿರಾಜ್, ಉದ್ಯಮಿ ಬಾಲಾಜಿ ರಾಘವೇಂದ್ರ ಆಚಾರ್ಯ, ಸೋದೆ ಶ್ರೀವಾದಿರಾಜ ಮಠದ ದಿವಾನ ಪಾಡಿಗಾರು ಶ್ರೀನಿವಾಸ ತಂತ್ರಿ, ಕಡಿಯಾಳಿ ಹಳೆ ವಿದ್ಯಾರ್ಥಿ ಸಂಘದ ಶ್ರೀನಿವಾಸ ಉಪಾಧ್ಯಾಯ, ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲಾ ಆಡಳಿತಾಧಿಕಾರಿ ಪ್ರಭಾವತಿ ಅಡಿಗ ಉಪಸ್ಥಿತರಿದ್ದರು. ಸಚಿನ್ ಪ್ರಭು, ಡಾ.ಸಿ.ಕೆ.ಮಂಜುನಾಥ್ ನಿರೂಪಿಸಿದರು. ಸರಿತಾ ಕೃಷ್ಣ, ರಂಜನಿ ಸಾಮಗ ಪ್ರಾರ್ಥಿಸಿದರು. ಶಿಕ್ಷಣ ಪ್ರತಿಷ್ಠಾನ ಕಾರ್ಯದರ್ಶಿ ರತ್ನಕುಮಾರ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net