ಕನ್ನಡ ಅನ್ನ ನೀಡುವ ಭಾಷೆ

udp-31-kannada
Published on

ಉಡುಪಿ: ಕನ್ನಡ ಭಾಷೆ ಅನ್ನ ನೀಡುವ ಭಾಷೆಯಾಗಿದೆ. ಕನ್ನಡದ ಏಳಿಗೆಗೆ ನಾವೆಲ್ಲ ಶ್ರಮಿಸಬೇಕು. ದಿನನಿತ್ಯವೂ ಕನ್ನಡ ಭಾಷೆಯನ್ನು ಹೆಚ್ಚು ಬಳಸುವ ಮೂಲಕ ಜನರಲ್ಲಿ ಭಾಷೆಯ ಮಹತ್ವ ತಿಳಿಸಬೇಕು. ಕನ್ನಡದ ಏಳಿಗೆಗೆ ಕಂಕಣಬದ್ಧರಾಗಬೇಕು ಎಂದು ಸಮಾನ ಮನಸ್ಕ ಕನ್ನಡಿಗರ ವೇದಿಕೆ ಅಧ್ಯಕ್ಷ ಶ್ರೀನಿವಾಸ್​ ರಾವ್​ ಕೆ. ಹೇಳಿದರು.

ಕಡಿಯಾಳಿ ಕಾತ್ಯಾಯಿನಿ ನಗರದಲ್ಲಿ ಸಮಾನ ಮನಸ್ಕ ಕ್ನನಡಿಗರ ವೇದಿಕೆಯಿಂದ ರಾಜ್ಯೋತ್ಸವದ ಅಂಗವಾಗಿ ನಡೆದ ಕನ್ನಡ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೆರೆ ರಾಜ್ಯಗಳೊಂದಿಗೆ ಭಾಷಾ ಸಮಸ್ಯೆಗಳಿದ್ದರೂ ದೇಶದ ಎಲ್ಲರಿಗೂ ಆಶ್ರಯ ನೀಡಿ ಸಾಮರಸ್ಯ ಜೀವನ ನಡೆಸುವ ಉದಾರತೆ ಕನ್ನಡ ನಾಡಿನ ವೈಶಿಷ್ಟ$್ಯತೆ ಆಗಿದೆ. ಗಡಿಭಾಗದಲ್ಲಿ ಕನ್ನಡ ಉಳಿಸಿ ಬೆಳೆಸುವಲ್ಲಿ ಕೈ ಜೋಡಿಸಬೇಕು ಎಂದರು.

ವೇದಿಕೆ ಸದಸ್ಯ ನಾಗೇಶ್​ ಮಾತನಾಡಿ, ಕನ್ನಡ ಕೇವಲ ಭಾಷೆಯಲ್ಲ. ಅದು ಬದುಕು. ವಿದ್ಯಾರ್ಥಿಗಳು ಕನ್ನಡ ಕಲಿಯುವಿಕೆಯಿಂದ ಬದುಕು ಭದ್ರವಾಗುತ್ತದೆ. ಬದುಕಲು ಎಲ್ಲಾ ಭಾಷೆಗಳು ಬೇಕಿದ್ದರೂ ಕನ್ನಡಿಗರಿಗೆ ಉಸಿರು ನೀಡುವ ಭಾಷೆ ಮಾತ್ರ ಕನ್ನಡ ಎಂದು ತಿಳಿಸಿದರು. ವೇದಿಕೆಯ ಸದಸ್ಯರಾದ ಸುರೇಶ್​, ಅನುರಾಧ ಜಿ.ಎಸ್​., ರಾಘವೇಂದ್ರ ಜಿ., ಜನಾರ್ಧನ, ಪ್ರೀತಿ, ಸ್ವಾತಿ, ಅಶ್ವಿನಿ, ಶಿಲ್ಪ, ಅರ್ಚನಾ, ಲಕ್ಷಿ$್ಮ, ವಿಜಯಲಕ್ಷಿ$್ಮ, ಉಮೇಶ್​ ಎಂ, ದಿವ್ಯಾ, ಕಲ್ಪನಾ, ವನಜಾ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net