ಕಡೇಕಲ್ ಅಬೀದ್ ಬಂಧನಕ್ಕೆ ಆದೇಶ

18 smg kadekal abhid
Published on

ಶಿವಮೊಗ್ಗ: ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ತಾಲೂಕಿನ ಕಡೇಕಲ್ ಗ್ರಾಮದ ಅಬೀದ್‌ಖಾನ್ ಅಲಿಯಾಸ್ ಕಡೇಕಲ್ ಅಬೀದ್‌ನನನ್ನು ಒಂದು ವರ್ಷ ಬಂಧಿಸಲು ಸೋಮವಾರ ರಾಜ್ಯ ಸರ್ಕಾರ ಆದೇಶಿಸಿದೆ.

ಕಡೇಕಲ್ ಅಬೀದ್ ಮೇಲೆ ಶಿವಮೊಗ್ಗದ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆ ಬೆದರಿಕೆ, ಹಲ್ಲೆ, ಗಾಂಜಾ ಮಾರಾಟ, ಸಾರ್ವಜನಿಕ ಶಾಂತಿಭಂಗ ಸೇರಿ 13 ಪ್ರಕರಣಗಳಿವೆ. ಈತ ಕಾನೂನು ಕ್ರಮಗಳನ್ನೂ ಲೆಕ್ಕಿಸದೇ ಅಕ್ರಮ ಚಟುವಟಿಕೆಗಳನ್ನು ಮುಂದುವರಿಸಿದ್ದು ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿರಿಸುವಂತೆ ಜಿಲ್ಲಾದಂಡಾಧಿಕಾರಿಯೂ ಆದೇಶಿಸಿದ್ದರು.

ಜು.8ರಂದು ಗೂಂಡಾ ಕಾಯ್ದೆ ಅಧಿನಿಯಮದಡಿ ರಚಿತವಾದ ಸಲಹಾ ಮಂಡಳಿಯು ಕಡೇಕಲ್ ಅಬೀದ್ ಬಂಧಿಸಲು ಸಾಕಷ್ಟು ಕಾರಣಗಳಿವೆಂದು ಅಭಿಪ್ರಾಯಪಟ್ಟಿದ್ದು ಸರ್ಕಾರ ಸೋಮವಾರ ಮಂಡಳಿಯ ಸಲಹೆಯನ್ನು ಪುರಸ್ಕರಿಸಿ ಕಡೇಕಲ್ ಅಬೀದ್‌ನ ಬಂಧನವನ್ನು 2022ರ ಜೂ.6ರಿಂದ ಒಂದು ವರ್ಷ ವಿಸ್ತರಣೆ ಮಾಡಿ ಸರ್ಕಾರ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net