ಖಾಸಗಿ ವಾಹನ ಡಿಕ್ಕಿಯಾಗಿ ಕಡವೆ ಸಾವು

Oplus_0
ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಅರಣ್ಯ ವ್ಯಾಪ್ತಿಯಲ್ಲಿ ಕಡವೆಗೆ ವಾಹನ ಡಿಕ್ಕಿ ಹೊಡೆದು ಅದರ ಸಾವಿಗೆ ಕಾರಣರಾದ ನಾಲ್ವರನ್ನು ಬಂಸಿರುವ ಅರಣ್ಯ ಇಲಾಖೆ ಸಿಬ್ಬಂದಿ.
Published on

ಯಳಂದೂರು: ತಾಲೂಕಿನ ಪ್ರಸಿದ್ಧ ಗಿರಿಧಾಮ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಖಾಸಗಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಕಡವೆಯೊಂದು ಮೃತಪಟ್ಟಿದೆ. ಈ ಸಂಬಂಧ ನಾಲ್ವರನ್ನು ಬಂಸಿ ವಾಹನವನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ.

ಶಿವಮೊಗ್ಗ ಜಿಲ್ಲೆಯ ಸಾಗರದ ಜಿ.ವರುಣ್, ಬೆಂಗಳೂರಿನ ಗೊಲ್ಲರಹಟ್ಟಿಯ ಎನ್.ಪಿ.ಪ್ರಶಾಂತ್, ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಆರ್.ಅಂಕಿತ್ ಹಾಗೂ ದಾವಣಗೆರೆ ಜಿಲ್ಲೆಯ ಕುವೆಂಪುನಗರದ ಎಚ್.ಡಿ.ವಿವೇಕಾನಂದ ಬಂಧಿತರು.

ಇವರು ತಮ್ಮ ಥಾರ್ ವಾಹನದಲ್ಲಿ ಬಿಳಿಗಿರಿರಂಗನಬೆಟ್ಟದಿಂದ ಯಳಂದೂರು ಕಡೆಗೆ ಬರುವಾಗ ಲಿಂಗನಕಟ್ಟೆಯ ಬಳಿರಸ್ತೆ ದಾಟುತ್ತಿದ್ದ ಕಡವೆಯೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ರಭಸಕ್ಕೆ ಕಡವೆ ಮೃತಪಟ್ಟಿದೆ. ಈ ಹಿನ್ನೆಲೆಯಲ್ಲಿ ಇವರನ್ನು ಬಂಸಿ ಅರಣ್ಯ ಇಲಾಖೆಯ ರೀತ್ಯ ಪ್ರಕರಣ ದಾಖಲಿಸಿ, ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಕಾರಿ ಎಚ್.ಎನ್.ನಾಗೇಂದ್ರ ನಾಯಕ, ಉಪವಲಯ ಅರಣ್ಯಾಕಾರಿ ಎಂ.ಯಶಸ್, ಅರಣ್ಯ ಪಾಲಕ ಭೀಮತಿ ಮುನ್ಯಾಳ್, ಎಸ್.ಕಾಡೇಶ್ ಚಂದಪ್ಪಗೋಳ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net