

ವಿಜಯವಾಣಿ ಸುದ್ದಿಜಾಲ ನಾಪೋಕ್ಲು
ಕಡಂಗ ಪ್ರೀಮಿಯರ್ ಕ್ರಿಕೆಟ್ ಲೀಗ್‌ನಲ್ಲಿ ಕಡಂಗ ರೈಸಿಂಗ್ ಸ್ಟಾರ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಕಡಂಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂದ್ಯಾವಳಿ ನಡೆಯಿತು. ಅಂತಿಮ ಪಂದ್ಯದಲ್ಲಿ ಬಲಿಷ್ಠ ಬ್ಲಾಸ್ಟರ್ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆಯಿತು.
ಕೆಪಿಎಲ್ ಸಂಸ್ಥಾಪಕಾದ್ಯಕ್ಷ ಕೆ.ಎಂ. ಜುನಿದ್ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಹೈಕೋರ್ಟ್ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ, ಕ್ರೀಡೆಯಿಂದ ಸಮಾಜದಲ್ಲಿ ಸ್ನೇಹ ಹೆಚ್ಚಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಇನ್ನೆಷ್ಟು ಕ್ರೀಡಾ ಚಟುವಟಿಕೆಗಳು ನಡೆಯಬೇಕೆಂದರು.
ನಿವೃತ್ತ ಯೋಧರಾದ ಸಲಾಂ, ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು. ಮುಖ್ಯಅತಿಥಿಗಳಾಗಿ ಕೆಪಿಎಲ್ ಅಧ್ಯಕ್ಷ ಆಸ್ಕರ್, ಪ್ರಮುಖರಾದ ಅಂಕಿತ್ ಪೊನ್ನಪ್ಪ, ಕೋಡಿರ ವಿನೋದ್ ನಾಣ್ಯಯ, ಪಾಂಡಂಡ ರಾಣಿ ಗಣಪತಿ, ಕವಿತಾ, ಸಂಜು ಕಾಳಯ್ಯ, ವಿಠಲ, , ಸಿ.ಎ. ಜುನೈದ್, ಮುಸ್ತಫ, ಅಂದುನ್ಜಿ, ಜೀವನ್, ಅಶ್ರಫ್, ಕರೀಂ, ಸಮದ್, ಷರೀಫ್, ರಾಜಿಕ್, ಜಲೀಲ್ ಮತ್ತಿತರರು ಇದ್ದರು.
ಪಂದ್ಯ ಶ್ರೇಷ್ಠ ಪ್ರಶಸ್ತಿ ರೈಸಿಂಗ್ ಸ್ಟಾರ್ ತಂಡದ ಸುಹೈಲ್, ಉತ್ತಮ ಬಾಲರ್ ನೌಶಾದ್, ಉತ್ತಮ ಕ್ಯಾಚ್ ರಾಜ್, ಸ್ಟೈಲಿಶ್ ಬ್ಯಾಟ್ಸ್ಮನ್ ಯುನೆಸ್, ಅತ್ಯಧಿಕ ರನ್ ಅಸ್ಕರ್, ಅರ್ಧ ಶತಕ ಬಾರಿಸಿದ ಆಟಗಾರ ಕುಟ್ಟಪ್ಪ, ಉದಯೋನ್ಮುಖ ಆಟಗಾರರು ಅಫ್ರಾಜ್, ಪ್ರಜ್ವತ್ ರಾಯ್ ಬಹುಮಾನ ಪಡೆದರು.
ತೀರ್ಪುಗಾರರಾಗಿ ಹನೀಫಾ ಮಡಿಕೇರಿ, ಸುಲ್ತಾನ್, ಸರ್ಫ್ಯೂದ್ದೀನ್ ಕಾರ್ಯನಿರ್ವಹಿಸಿದರು. ಸ್ಕೋರರ್ ಆಗಿ ನಾಫಿ, ರಾಜಿಕ್, ಅನಸ್, ಆಸ್ಕರ್ ಕಾರ್ಯನಿರ್ವಹಿಸಿದರು. ಪಿ.ಎಚ್. ಶಮೀರ್ ನಿರೂಪಿಸಿದರು.