

ಬೂದಿಕೋಟೆ: ಬೊಮ್ಮಗಾನಹಳ್ಳಿ, ಮಾರಾಂಡಹಳ್ಳಿ ಹಾಗೂ ಸುತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ರಾತ್ರಿ ಕಾಡಾನೆ ಹಿಂಡು ದಾಳಿ ನಡೆಸಿ ಟೊಮ್ಯಾಟೊ ಬೆಳೆ, ನೀರಿನ ಪೈಪ್, ಡ್ರಿಪ್ ಫಿಲ್ಟೃರ್ ಇನ್ನಿತರ ವಸ್ತುಗಳು ನಾಶಪಡಿಸಿವೆ.
ತಮಿಳುನಾಡು ಅರಣ್ಯ ಪ್ರದೇಶದಿಂದ ಬಂದಿರುವ 10 ಕಾಡಾನೆಗಳು ಬೇರ್ಪಟ್ಟಿದ್ದು, ಬೊಮ್ಮಗಾನಹಳ್ಳಿಯಲ್ಲಿ ರೈತ ಶಿವಪ್ಪ ಎಂಬುವರು 2 ಎಕರೆ ಟೊಮ್ಯಾಟೊ, ಡ್ರಿಪ್ ಫಿಲ್ಟೃರ್, ನೀರಿನ ಡ್ರಮ್ ಹಾಗೂ ಪೈಪ್‌ಗಳನ್ನು ನಾಶ ಮಾಡಿವೆ. ಮಾರಾಂಡಹಳ್ಳಿಯ ರೈತ ವೆಂಕಟೇಶಪ್ಪ ಎಂಬುವವರು 1 ಎಕರೆಯಲ್ಲಿ ಬೆಳೆದಿದ್ದ ಟೊಮ್ಯಾಟೊ ಹಾಗೂ ನೀರಿನ ಪೈಪ್‌ಗಳನ್ನು ನಾಶ ಮಾಡಿವೆ.
ಪ್ರತಿ ವರ್ಷ ಆನೆ ದಾಳಿಗೆ ರೈತರು ಬೆಳೆ ಕಳೆದುಕೊಳ್ಳುತ್ತಿದ್ದು, ಇಲಾಖೆಯಿಂದ ಪರಿಹಾರ ಸಿಗುತ್ತ್ಲಿ ಎಂದು ಬೊಮ್ಮಗಾನಹಳ್ಳಿ ರೈತ ಶಿವಪ್ಪ ಅಳಲು ತೋಡಿಕೊಂಡಿದ್ದಾರೆ.
ಸುಮಾರು 9 ಆನೆಗಳ ಹಿಂಡು ಮೂರು ಗುಂಪುಗಳಾಗಿ ವಿಂಗಡಣೆಯಾಗಿದ್ದು, ಎ್ಲವನ್ನೂ ಒಟ್ಟು ಗೂಡಿಸಿ ಅರಣ್ಯ ಪ್ರದೇಶಕ್ಕೆ ಓಡಿಸಲು ಪ್ರಯತ್ನಿಸುತ್ತಿದ್ದೇವೆ. ಬೆಳೆ ನಷ್ಟವಾಗಿರು ರೈತರಿಗೆ ಅರಣ್ಯ ಇಲಾಖೆಂದ ಪರಿಹಾರ ನೀಡಲಾಗುವುದು. ವಿದ್ಯಾ, ಅರಣ್ಯ ಇಲಾಖೆ ಅಧಿಕಾರಿ