ಮಳೆಗಾಲದಲ್ಲಿ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ : ಕೆ.ಪಿ.ಸುಚರಿತ ಶೆಟ್ಟಿ ಸಲಹೆ

New Project (34)
Published on

ಮೂಡುಬಿದಿರೆ: ಮಕ್ಕಳಿಗೆ ಎಳವೆಯಲ್ಲಿಯೇ ಬದುಕಿನ ವಿಚಾರಗಳ ಬಗ್ಗೆ ಅರಿವು, ಉತ್ತಮ ಶಿಕ್ಷಣ ನೀಡಿದರೆ ಮುಂದೆ ಸಮಾಜ ಸಾಮರಸ್ಯದಿಂದ ಇರುತ್ತದೆ. ಸರ್ಕಾರಿ ಶಾಲೆಗಳಲ್ಲಿ ಸಮರ್ಥ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಪಾಲಕರು ಇದನ್ನು ಅರಿಯುವುದು ಮುಖ್ಯ. ಮಳೆಗಾಲದಲ್ಲಿ ಮಕ್ಕಳ ಸುರಕ್ಷತೆ, ಆರೋಗ್ಯದ ಬಗ್ಗೆ ಪಾಲಕರು ಹೆಚ್ಚಿನ ನಿಗಾವಹಿಸಬೇಕು ಎಂದು ಕೆಎಂಎಫ್ ನಿರ್ದೇಶಕ ಕೆ.ಪಿ.ಸುಚರಿತ ಶೆಟ್ಟಿ ಹೇಳಿದರು.

ಕಡಂದಲೆ ವಿದ್ಯಾಗಿರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಸೀತಾರಾಮ ಸಾಲ್ಯಾನ್, ಉಪಾಧ್ಯಕ್ಷೆ ಪ್ರಣೀತಾ ಪೂಜಾರಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್ ಪೂಜಾರಿ ಪಾಲಡ್ಕ, ಮುಖ್ಯಶಿಕ್ಷಕಿ ಪ್ರತಿಭಾ ಎಂ.ಪಿ, ಶಿಕ್ಷಕರಾದ ಸತೀಶ್ ಶೆಟ್ಟಿ, ಪೌಲಿನ್ ಪಿಂಟೋ, ಸುಮನಾ ಎಚ್.ಸಿ, ಅಂಗನವಾಡಿ ಕಾರ್ಯಕರ್ತೆ ಬೆನಡಿಕ್ಟಾ ಗಾಂತಿಸ್ ಹಾಗೂ ಪಾಲಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net