ಕ್ಷಮೆಯಾಚಿಸಿ ದಸರಾ ಉದ್ಘಾಟನೆಗೆ ಬರಲಿ: ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಆಗ್ರಹ

Kadamba Sene Press Conference Mandya
Published on

ಮಂಡ್ಯ: ಸಾಹಿತಿ ಬಾನು ಮುಷ್ತಾಕ್ ಅವರು ಕನ್ನಡತಾಯಿ ಭುವನೇಶ್ವರಿ ಬಗೆಗಿನ ಹೇಳಿಕೆಗೆ ಕ್ಷಮೆ ಕೇಳಿದ ಬಳಿಕ ಮೈಸೂರು ದಸರಾ ಉದ್ಘಾಟನೆಗೆ ಬರಬೇಕು ಎಂದು ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಆಗ್ರಹಿಸಿದರು.

ಕನ್ನಡ ಭಾಷೆಗೆ ಭುವನೇಶ್ವರಿ ತಾಯಿ ಸ್ಥಾನ ನೀಡಿ, ನಾಡಧ್ವಜಕ್ಕೆ ಅರಿಶಿನ, ಕುಂಕುಮ ಬಣ್ಣದಿಂದ ಗೌರವ ಸಲ್ಲಿಸಿರುವುದು ಕನ್ನಡಿಗರ ಅಸ್ಮಿತೆ. ಅದನ್ನ ವ್ಯಂಗ್ಯವಾಗಿ ಹೇಳಿರುವ ನೀವು ಮೊದಲು ಕನ್ನಡಿಗರ ಭಾವನೆ ಅರ್ಥ ಮಾಡಿಕೊಳ್ಳಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕನ್ನಡವನ್ನು ಭುವನೇಶ್ವರಿ ಮಾಡಿ ನಾಡಧ್ವಜಕ್ಕೆ ಅರಿಶಿನ, ಕುಂಕುಮ ಹಚ್ಚಿಬಿಟ್ಟಿರಿ ನಾನೆಲ್ಲಿ ನಿಲ್ಲಬೇಕು, ಹೇಗೆ ಹೊಂದಿಕೊಳ್ಳಬೇಕು ಎಂದು ಉದ್ಧಟನ ತೋರಿರುವ ನೀವು ನಮ್ಮ ಕನ್ನಡಿಗರಿಗೆ ಮಾಡಿದ ಅವಮಾನವಾಗಿದೆ. ನಮ್ಮ ನಾಡದೇವತೆ ಚಾಮುಂಡೇಶ್ವರಿಯು ಅರಿಶಿನ ಕುಂಕುಮ ಶೋಭಿತರಾಗಿರುವುದರಿಂದ ನಿಮಗೆ ಮುಜುಗರ ಆಗಲ್ಲವೇ ಎಂದು ಪ್ರಶ್ನಿಸಿದರು.

ಮುಖಂಡರಾದ ಮೋಹನ್ ಚಿಕ್ಕಮಂಡ್ಯ, ಉಮ್ಮಡಹಳ್ಳಿ ನಾಗೇಶ್, ಗುಡಿಗೇನಹಳ್ಳಿ ಆರಾಧ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net