ಕನ್ನಡದಲ್ಲಿಯೇ 3,571 ವಿದ್ಯಾರ್ಥಿಗಳು ಅನುತ್ತೀರ್ಣ: ಕದಂಬ ಸೈನ್ಯದ ಸಂಸ್ಥಾಪಕ ಬೇಕ್ರಿ ರಮೇಶ್ ಅಸಮಾಧಾನ

Kadamba Sene press conference Mandya
Published on

ಮಂಡ್ಯ: ಎಸ್ಸೆಸ್ಸೆಲ್ಸಿ ಮೊದಲ ಪರೀಕ್ಷೆಯಲ್ಲಿ 3,571 ವಿದ್ಯಾರ್ಥಿಗಳು ಕನ್ನಡದಲ್ಲಿ ಅನುತ್ತೀರ್ಣರಾಗಿರುವುದು ಬೇಸರದ ವಿಷಯ ಎಂದು ಕದಂಬಸೈನ್ಯದ ಸಂಸ್ಥಾಪಕ ಬೇಕ್ರಿ ರಮೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಮಾತೃ ಭಾಷೆಯಲ್ಲಿಯೇ ಇಂತಹ ಫಲಿತಾಂಶ ಬರುತ್ತದೆ ಎನ್ನುವ ನಿರೀಕ್ಷೆ ಇರಲಿಲ್ಲ. ಇದಕ್ಕೆ ಪಾಲಕರು, ಶಿಕ್ಷಕರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯೇ ಕಾರಣ. ಕಾವೇರಿ ನದಿ ನೀರು ನಮಗೆ ಹೇಗೆ ಜೀವ ದ್ರವ್ಯವೋ ಅದೇ ರೀತಿ ಕನ್ನಡ ಉಸಿರಾಗಿದೆ. ಕನ್ನಡ ಭಾಷೆ ಕಲಿಸದೆ ಇರುವ ಶಿಕ್ಷಕರು, ಶಿಕ್ಷಣ ಇಲಾಖೆ ಮತ್ತು ಪಾಲಕರು ಕಾವೇರಿ ನೀರು ಇಲ್ಲದೆ ಬದುಕಲು ಹೇಗೆ ಆಗುವುದಿಲ್ಲವೋ, ಕನ್ನಡ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂಬ ವಾತಾವರಣ ನಿರ್ಮಾಣ ಮಾಡಬೇಕಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರಸ್ತುತ ಸರ್ಕಾರಿ ಶಾಲೆ ಬಾಗಿಲು ಮುಚ್ಚುವಂತಹ ಹುನ್ನಾರವನ್ನು ನಡೆಸಲಾಗುತ್ತದೆ. ಸರ್ಕಾರ ಈ ಬಗ್ಗೆ ಸಂಪೂರ್ಣವಾಗಿ ನಿರ್ಲಕ್ಷೃತನ ತೋರುತ್ತದೆ. ಐದು ಗ್ಯಾರಂಟಿಗಳ ಬಗ್ಗೆ ಹೆಚ್ಚು ಉತ್ತೇಜನ ನೀಡುತ್ತಿರುವ ಸರ್ಕಾರ, ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಸರ್ಕಾರದ ಈ ವೈಫಲ್ಯದಿಂದ ಖಾಸಗಿ ಶಾಲೆಗಳಿಗೆ ಲಾಭವಾಗುತ್ತಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಹೈಟೆಕ್ ಮಾಡಿದರೆ ಒಳಿತು. ಅದೇ ರೀತಿ ಬ್ಯಾಂಕ್, ಅಂಚೆ ಕಚೇರಿ, ರೈಲ್ವೆ ನಿಲ್ದಾಣದ ಕಚೇರಿಯಲ್ಲಿ ಕನ್ನಡದಲ್ಲಿ ವ್ಯವಹಾರ ಮಾಡುತ್ತಿಲ್ಲ. ಈ ಬಗ್ಗೆಯೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು .

ಸೈನ್ಯದ ನಾಗೇಶ್, ಚಂದ್ರಶೇಖರ್, ಬಸವರಾಜು, ಜೋಸೆಫ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net