ಹೆಚ್ಚುತ್ತಿದೆ ರಾಷ್ಟ್ರದ್ರೋಹಿಗಳ ಸಂಖ್ಯೆ: ಮೈಸೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಕಳವಳ

Kadamba-Chalukya Memorial Festival mandya
Published on

ಮಂಡ್ಯ: ಪ್ರಸ್ತುತ ದಿನಗಳಲ್ಲಿ ಸನಾತನ ಧರ್ಮ ವಿರೋಧಿಗಳು ಮತ್ತು ರಾಷ್ಟ್ರದ್ರೋಹಿಗಳು ಹೆಚ್ಚಾಗುತ್ತಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಕಳವಳ ವ್ಯಕ್ತಪಡಿಸಿದರು.

ಕದಂಬಸೈನ್ಯ ಕನ್ನಡ ಸಂಘಟನೆ, ಕದಂಬ ಚಕ್ರವತ್ರಿ ಮಯೂರವರ್ಮ-ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಿಕೇಶಿ ಹೋರಾಟ ಸಮಿತಿ ಸಹಕಾರದಲ್ಲಿ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಕದಂಬ-ಚಾಲಕ್ಯ ಸಂಸ್ಮರಣಾ ಮಹೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಅಭಿನಂದಿಸಿ ಮಾತನಾಡಿದರು.

ಸಂವಿಧಾನಾತ್ಮಕ ಕಾನೂನು ಜಾರಿಯಾಗುವ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗುತ್ತಾರೆ. ಆದರೂ ಕಾನೂನು ಕ್ರಮಕೈಗೊಳ್ಳದೆ ಉದಾಸೀನ ಮನೋಭಾವ ತೋರುವ ಆಡಳಿತ ಪಕ್ಷ 2 ವರ್ಷದ ಹಿಂದೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪಾಕ್ ವಿರೋಧಿಸಿ ಪ್ರತಿಭಟನೆ ಮಾಡುವಾಗ ಗ್ರಾಮೀಣ ವ್ಯಕ್ತಿಯೊಬ್ಬ ಹಿಂದಿ ಪದದ ಅರ್ಥ ತಿಳಿಯದೆ ಘೋಷಣೆ ಕೂಗಿದ್ದನ್ನೇ ದೊಡ್ಡದು ಮಾಡಿರುವುದು ಸಮಂಜಸವಲ್ಲ. ವಿಶ್ವವೇ ಮೆಚ್ಚುವಂತೆ ದೇಶದ ಸಮಗ್ರ ಅಭಿವೃದ್ಧಿಗೆ ನಾಂದಿಯಾಡುತ್ತಿರುವ ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಟೀಕಿಸುವವರು ಹೆಚ್ಚಾಗುತ್ತಿದ್ದಾರೆ. ಹತ್ತಾರು ವರ್ಷದಲ್ಲಿ ಭಾರತ ವಿಶ್ವಮಟ್ಟದಲ್ಲಿ ವಿಶ್ವಗುರು ಸ್ಥಾನ ಪಡೆದು ಅಭಿವೃದ್ಧಿ ರಾಷ್ಟ್ರ ಎನ್ನಿಸಿಕೊಳ್ಳುವ ದಿನ ದೂರವಿಲ್ಲ ಎಂದರು.

ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಕದಂಬಸೈನ್ಯ ಅಧ್ಯಕ್ಷ ಬೇಕ್ರಿ ರಮೇಶ್, ಸಾಹಿತಿ ಶ್ರೀನಿವಾಸ್ ಶೆಟ್ಟಿ, ಶಿವಕುಮಾರ್, ಆರಾಧ್ಯ, ದಸಂಸ ರಾಜ್ಯ ಸಂಚಾಲಕ ಸೋಮನಹಳ್ಳಿ ಅಂದಾನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net