ಕದಳಿಶ್ರೀ ವೇದಿಕೆಯಿಂದ ಅಮೃತ ಭೋಜನ-ಜ್ಞಾನ ಸಿಂಚನ

31GDG05
Published on

ಗದಗ: ಬಸವಾದಿ ಶರಣರ ಪ್ರೋತ್ಸಾಹದಿಂದ ಶರಣೆಯರು ವಚನ ರಚನೆ ಮಾಡುವ ಮೂಲಕ ವಚನ ಸಾಹಿತ್ಯಕ್ಕೆ ವಿಶಿಷ್ಠ ಕೊಡುಗೆ ನೀಡಿದ ಅಕ್ಕಮಹಾದೇವಿ ಶ್ರೇಷ್ಠ ವಚನಗಾರ್ತಿ ಎಂದು ಚಿಂತಕಿ ಸುಜಾತಾ ಗುಡಿಮನಿ ಹೇಳಿದರು.
ಅವರು ಬುಧವಾರ ಗದಗ ಜಿಲ್ಲಾ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆಯಿಂದ ಗದುಗಿನ ರಾಜೀವಗಾಂಧಿ ನಗರದ ಸ.ಕ.ಗಂ.ಮ.ಶಾಲೆ ನಂ. ೮ ರಲ್ಲಿ ನಡೆದ ಅಮೃತ ಭೋಜನ-ಜ್ಞಾನ ಸಿಂಚನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದರು.
ಮಕ್ಕಳು ವಚನಕಾರರ ವಚನಗಳನ್ನು ಓದಿ ತಿಳಿದುಕೊಳ್ಳಬೇಕು ಅವು ನಮಗೆ ಉತ್ತಮ ಮಾರ್ಗದರ್ಶನ ನೀಡುತ್ತವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲಲಿತಾ ಉಮನಾಬಾದಿ ಶರಣರ ವಚನ ಪ್ರಸಾರದ ಘನ ಉದ್ದೇಶದಿಂದ ಶ್ರಾವಣ ಮಾಸದಾದ್ಯಂತ ಶಾಲೆಗಳಲ್ಲಿ ಈ ಕಾರ್ಯಕ್ರಮ ದಾನಿಗಳ ಸಹಕಾರದಿಂದ ನಡೆದು ಬರುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಎಂ.ಎಲ್.ಹೊಸಳ್ಳಿ ಮಾತನಾಡಿ ಸಮುದಾಯ ಸಂಘಟನೆಗಳು ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕಲಿಕೆಗೆ ಸ್ಪೂರ್ತಿಯಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳಿಗೆ ಸಿಹಿ ಭೋಜನ ವಿತರಿಸಿ ಕಲಿಕಾ ಸಾಮಗ್ರಿಗಳನ್ನು ಉತ್ತಮ ಪುಸ್ತಕಗಳನ್ನು ನೀಡುತ್ತಿರುವದು ಹೆಮ್ಮೆಯ ಸಂಗತಿ ಎಂದರು.
ವೇದಿಕೆಯ ಮೇಲೆ ವಿದ್ಯಾ ಹುಲಬನ್ನಿ, ಮಂಜುಳಾ ತಂಗೂಡಿ ಉಪಸ್ಥಿತರಿದ್ದರು. ಕವಿತಾ ದಂಡಿನ ಸ್ವಾಗತಿಸಿದರು ಎಂ.ವ್ಹಿ.ರಾಮಣ್ಣವರ ಪರಿಚಯಿಸಿದರು, ಜಿ.ಎಂ.ವಸ್ತçದ ನಿರೂಪಿಸಿದರು, ರೂಪಾ ರಾಜೋಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net