

ವಿಜಯವಾಣಿ ಸುದ್ದಿಜಾಲ ಗದಗ
ಶರಣರ ಚಿಂತನಪರ ನಿಲುವು ಸಾಮಾಜಿಕ ದೃಷ್ಠಿಕೋನವನ್ನು ಬದಲಿಸುತ್ತದೆ. ವಚನಗಳ ಮೂಲಕ ಜನಸಾಮಾನ್ಯರಲ್ಲಿ ಬದುಕಿನ ನಿಜ ಅರ್ಥ ತಿಳಿಸಿದವರು ಮಹಾತ್ಮರು, ಶರಣರು ಎಂದು ಚಿಂತಕಿ ಜ್ಯೋತಿ ಭರಮಗೌಡರ ಹೇಳಿದರು.
ಶುಕ್ರವಾರ ಬೆಟಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ನಂ. 1 ರಲ್ಲಿ ಗದಗ ಜಿಲ್ಲಾ ಶರಣೆ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆಯಿಂದ ಜರುಗಿದ ಅಮೃತಭೋಜನ ಜ್ಞಾನಸಿಂಚನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಿಹಿ ಭೋಜನ ಉಣಬಡಿಸಿ ಮಾತನಾಡಿದರು.
ವಿದ್ಯಾಥಿರ್ಗಳು ತಮ್ಮ ವಿದ್ಯಾಭ್ಯಾಸದೊಂದಿಗೆ ವಚನಗಳನ್ನು, ನುಡಿಮುತ್ತುಗಳನ್ನು, ಮಹಾತ್ಮರ ಚರಿತ್ರೆಗಳನ್ನು ತಿಳಿದುಕೊಳ್ಳಬೇಕು ಎಂದರು.
ವಿಜಯಲಕ್ಷಿ ಮಾನ್ವಿ ಮಾತನಾಡಿ, ಮಕ್ಕಳು ಓದು ಬರಹದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಸೃಜನಶೀಲತೆ ಬೆಳೆಯುತ್ತದೆ ಎಂದರು.
ಹೇಮಾ ಪೊಂಗಾಲಿಯಾ, ಸಾಗರಿಕಾ ಅಕ್ಕಿ, ಗೀತಾ ಜವಳಿ, ಕವಿತಾ ದಂಡಿನ, ರ್ಪೂಣಿಮಾ ತಾಳಿಕೋಟಿ, ರತಾ ಕಬಾಡಿ, ಹೇಮಾ ಮುಳಗುಂದ ಹಲವರು ಇದ್ದರು.