ಹುಬ್ಬಳ್ಳಿ: ಹೂಬಳ್ಳಿ ಲೇಖಕಿಯರು ಪ್ರಸ್ತುತ ಪಡಿಸುವ ಕದಳೀ ಕಲ್ಯಾಣ ನಾಟಕ ಪ್ರದರ್ಶನ ಡಿ. 21ರಂದು ಸಂಜೆ 5ಕ್ಕೆ ಇಲ್ಲಿಯ ದೇಶಪಾಂಡೆನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಏರ್ಪಡಿಸಲಾಗಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.
ಮೈಸೂರಿನ ಹಿರಿಯ ಲೇಖಕಿ ಉಷಾ ನರಸಿಂಹನ್ ರಚಿಸಿ, ಹವ್ಯಾಸಿ ರಂಗ ಕಲಾವಿದೆ ರೂಪಾ ಜೋಶಿ ನಿರ್ದೇಶನ ಮಾಡಿರುವ ನಾಟಕದಲ್ಲಿ ರಂಗ ಗೀತೆಗಳನ್ನು ಡಾ. ರಾಮು ಮೂಲಗಿ ಹಾಡಲಿದ್ದಾರೆ.
ಚಿತ್ರಕಲಾ ಶಿಕ್ಷಕ ಎಂ.ವೈ. ಬಡಿಗೇರ ರಂಗ ಸಜ್ಜಿಕೆ, ವಿನ್ಯಾಸ ಮಾಡಿದ್ದು, ರಂಗ ನಿರ್ದೇಶಕ ಮಾರಣ್ಣಾ ಬಿ.ಆರ್. ಬೆಳಕು, ಪ್ರಸಾದನ ಸೇವೆ ನೀಡಿದ್ದಾರೆ.
ಉಷಾ ನರಸಿಂಹನ್ ಅವರು ವೇದಿಕೆ ಕಾರ್ಯಕ್ರಮ ಉದ್ಘಾಟಿಸುವರು. ರಂಗ ನಿರ್ದೇಶಕ ಬಸವರಾಜ ಚಕ್ರಸಾಲಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಡಾ. ಸರೋಜಾ ಮೇಟಿ ಅಧ್ಯಕ್ಷತೆ ವಹಿಸುವರು.