

ಕೆ.ಆರ್.ಸಾಗರ: ಕಡೇ ಕಾರ್ತಿಕ ಸೋಮವಾರ ಅಂಗವಾಗಿ ರಾತ್ರಿ ಕೆ.ಆರ್.ಸಾಗರ ಗ್ರಾಮದ ಅರಳಿಕಟ್ಟೆಯಲ್ಲಿ ಕಡಲೆಪುರಿ ಪರಿಷೆ ನಡೆಯಿತು.
ಅರ್ಚಕರಾದ ಮರಿಯಪ್ಪ ಮತ್ತು ಗಣೇಶ್ ಅವರು ಮಹದೇಶ್ವರ ಸ್ವಾಮಿ ಭಾವಚಿತ್ರ ಮತ್ತು ಕಡಲೆಪುರಿ ಪರಿಷೆಗೆ ಪೂಜೆ ಸಲ್ಲಿಸಿದರು. ಬಳಿಕ ಭಕ್ತರು ದೇವರಿಗೆ ಹಣ್ಣು-ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು. ಸಾವಿರಕ್ಕೂ ಹೆಚ್ಚು ಲೀಟರ್ ಪುರಿಯನ್ನು ನೂರಾರು ಭಕ್ತರಿಗೆ ಪ್ರಸಾದದ ರೂಪದಲ್ಲಿ ಹಂಚಲಾಯಿತು.