ಇಂದಿನಿಂದ ಕಡಲೆಕಾಯಿ ಪರಿಷೆ

ಯಲಹಂಕ ವೆಂಕಟಾಲದ ಶ್ರೀ ಅಭಯ ಮಹಾಗಣಪತಿ ದೇವಾಲಯದ ಟ್ರಸ್ಟ್ ವತಿಯಿಂದ 14ನೇ ವರ್ಷದ ಕಡಲೆಕಾಯಿ ಪರಿಷೆಯನ್ನು ಶನಿವಾರದಿಂದ ಎರಡು ದಿನ ಹಮ್ಮಿಕೊಳ್ಳಲಾಗಿದೆ.
ಕಡಲೆಕಾಯಿ
goundnetfolder
Published on: 

ಬೆಂಗಳೂರು: ಯಲಹಂಕ ವೆಂಕಟಾಲದ ಶ್ರೀ ಅಭಯ ಮಹಾಗಣಪತಿ ದೇವಾಲಯದ ಟ್ರಸ್ಟ್ ವತಿಯಿಂದ 14ನೇ ವರ್ಷದ ಕಡಲೆಕಾಯಿ ಪರಿಷೆಯನ್ನು ಶನಿವಾರದಿಂದ ಎರಡು ದಿನ ಹಮ್ಮಿಕೊಳ್ಳಲಾಗಿದೆ.

ಶಾಸಕ ಎಸ್.ಆರ್. ವಿಶ್ವನಾಥ್ ಚಾಲನೆ ನೀಡಲಿದ್ದಾರೆ. ಆನಂತರ ವಿವಿಧ ಭಾಗಗಳಿಂದ ರೈತರು ತಂದಿರುವ ನಾನಾ ತಳಿಗಳ ಕಡಲೆಕಾಯಿ ಪ್ರದರ್ಶನ ಹಾಗೂ ವಾರಾಟ ನಡೆಯಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಪರಿಷೆ ಏರ್ಪಡಿಸಿದ್ದು, ರೈತರ ಹಾಗೂ ವ್ಯಾಪಾರಿಗಳ ಬದುಕಿಗೆ ಚೈತನ್ಯ ತುಂಬಲಿದೆ.

ಗ್ರಾಮೀಣ ಆರ್ಥಿಕ ಪ್ರಗತಿಗೆ ಹೊಸ ಉತ್ಸಾಹ ನೀಡಲಿದೆ ಎಂದು ದೇವಾಲಯದ ಧರ್ಮದರ್ಶಿ ಕೆಂಪೇಗೌಡ ತಿಳಿಸಿದ್ದಾರೆ. ಕಡಲೆಕಾಯಿ ಬೆಳೆಗಾರರು ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ವಾರಾಟ ವಾಡಲು ಅವಕಾಶ ಕಲ್ಪಿಸಲಾಗಿದೆ. ಪರಿಷೆಯಲ್ಲಿ ಭಾಗವಹಿಸಿ ವ್ಯಾಪಾರ ವಾಡುವ ಪ್ರತಿಯೊಬ್ಬರಿಗೂ ಉಚಿತ ವಸತಿ, ಊಟದ ವ್ಯವಸ್ಥೆ ಇರುತ್ತದೆ.

ಭಾಗವಹಿಸುವ ಪ್ರತಿಯೊಬ್ಬ ವ್ಯಾಪಾರಿಗೂ 500 ರೂ. ಪ್ರೋತ್ಸಾಹಧನ ನೀಡಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರೈತರನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದ್ದಾರೆ.