ಕಡಲೆ ಸಮಗ್ರ ಬೆಳೆ ನಿರ್ವಹಣೆ ತರಬೇತಿ

IMG20241019132200.jpg
Published on

ಬೆಳಗಾವಿ: ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಿಂದ ರಾಮದುರ್ಗ ತಾಲೂಕಿನ ದಾಡೇಭಾವಿ ತಾಂಡಾದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಉಪಯೋಜನೆಯಡಿ ಕಡಲೆ ಸಮಗ್ರ ಬೆಳೆ ನಿರ್ವಹಣೆ ತರಬೇತಿ ಕಾರ್ಯಕ್ರಮ ಜರುಗಿತು.

ತೋಟಗಾರಿಕೆ ವಿಜ್ಞಾನಿ ಪ್ರವೀಣ ಯಡಹಳ್ಳಿ ಅವರು, ಪರಿಶಿಷ್ಟ ಜಾತಿ ಉಪಯೋಜನೆಯ ರೂಪು-ರೇಷೆಗಳು, ಉದ್ದೇಶ, ಯೋಜನೆಯಡಿ ಆಗುವ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು.

ಮಣ್ಣು ವಿಜ್ಞಾನಿ ಎಸ್.ಎಂ. ವಾರದ ಅವರು, ಮಣ್ಣು ಪರೀಕ್ಷೆಯ ಮಹತ್ವ, ಮಣ್ಣು ಮಾದರಿ ತೆಗೆಯುವ ವಿಧಾನ ಹಾಗೂ ಕಡಲೆ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಬಗ್ಗೆ ವಿವರಿಸಿದರು.

ಇಳುವರಿ ಹೆಚ್ಚಿಸಲು ಕುಡಿ ಚಿವುಟುವ ವಿಧಾನದ ಬಗ್ಗೆ ಹಾಗೂ ಅದರಿಂದಾಗುವ ಪ್ರಯೋಜನಗಳು ತಿಳಿಸಿದರು. ಕಡಲೆಯಲ್ಲಿ ಕಳೆ ಹಾಗೂ ನೀರು ನಿರ್ವಹಣೆ ಬಗ್ಗೆ ವಿವರಿಸಿದರು. ಗ್ರಾಮದ ಸುಮಾರು 60 ಪ್ರಗತಿಪರ ರೈತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net