ವಿಷಮುಕ್ತ ಪುಣ್ಯಸ್ನಾನ ಅಭಿಯಾನ

Published on

ಹುಬ್ಬಳ್ಳಿ: ಜೀವಜಲವನ್ನು ಉಳಿಸಿ ಜಲಚರ ಜೀವಿಗಳನ್ನು ರಕ್ಷಣೆ ಮಾಡುವ ಮಹತ್ವದ ಉದ್ದೇಶದೊಂದಿಗೆ ಇಲ್ಲಿಯ ವರದಶ್ರೀ ಫೌಂಡೇಷನ್ ಜ್ಞಾನ ಸಂಸತ್ತಿನ ವರದಶ್ರೀ ಪರಿವಾರದ ಆರ್ಗ್ಯಾನಿಕ್ ಅರಮನೆ ಹಾಗೂ ನಾಡಿನ ವಿವಿಧ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ತೀರ್ಥ ಕ್ಷೇತ್ರಗಳಲ್ಲಿ ಮಕರ ಸಂಕ್ರಮಣ ದಿನದಂದು ವಿಷಮುಕ್ತ ಪುಣ್ಯ ಸ್ನಾನ ಅಭಿಯಾನ ಆಯೋಜಿಸಲಾಗಿದೆ.

ಲಕ್ಷಾಂತರ ಜನರಿಗೆ ನಾಡಿನ ತೀರ್ಥಕ್ಷೇತ್ರಗಳಲ್ಲಿ ಪುಣ್ಯಸ್ನಾನಕ್ಕಾಗಿ ಕಡ್ಲೆ ಹಿಟ್ಟಿನ ಪ್ಯಾಕೇಟ್ ಉಚಿತ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಂಪು, ಸಾಬೂನಿನ ವಿಷಸ್ನಾನ ಬಿಡಿ, ಕಡ್ಲೆ ಹಿಟ್ಟಿನಿಂದ ವಿಷಮುಕ್ತ ಪುಣ್ಯ ಸ್ನಾನ ಮಾಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಲಾಗುತ್ತಿದೆ.

ಯಾವುದೇ ಸಂಘ ಸಂಸ್ಥೆಯವರು ಅಭಿಯಾನಕ್ಕೆ ಕೈಜೋಡಿಸಿ ತೀರ್ಥ ಕ್ಷೇತ್ರಗಳಲ್ಲಿ ಉಚಿತ ಕಡ್ಲೆ ಹಿಟ್ಟಿನ ಪ್ಯಾಕೇಟ್ ವಿತರಣೆ ಮಾಡಬಹುದು. ವರದಶ್ರೀ ಫೌಂಡೇಷನ್ ಕಡ್ಲೆ ಹಿಟ್ಟಿನ ಪ್ಯಾಕೇಟ್ ಉಚಿತವಾಗಿ ನೀಡಲಿದೆ ಎಂದು ಫೌಂಡೇಷನ್ ಸಂಸ್ಥಾಪಕ ಮಲ್ಲಿಕಾರ್ಜುನ ರಡ್ಡೇರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net