ಕಡಬ ಕ್ರಿಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ 25 ಮಂದಿ ಮಾತೃ ಧರ್ಮಕ್ಕೆ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧರ್ಮ ರಕ್ಷಾ ಯಜ್ಞ

krista
Published on


ಮಂಗಳೂರು: ಪುತ್ತೂರು ಜಿಲ್ಲೆಯ ಕಡಬ ತಾಲೂಕಿನ ಪಂಜ ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದ ವತಿಯಿಂದ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧರ್ಮ ರಕ್ಷಾ ಯಜ್ಞ ವನ್ನು ನಡೆಸಲಾಯಿತು.


ಈ ಸಂದರ್ಭದಲ್ಲಿ ಕ್ರೈಸ್ತ ಮತಕ್ಕೆ ಮತಾಂತರಗೊಂಡ ಕೊರಗ ಸಮುದಾಯದ, ಏಳು ಕುಟುಂಬದ 15 ಪುರುಷರು, 10 ಮಹಿಳೆಯರು ಸೇರಿದಂತೆ ಒಟ್ಟು 25 ಜನರನ್ನು ಮರಳಿ ಮಾತ್ರ ಧರ್ಮಕ್ಕೆ ಕರೆ ತರಲಾಯಿತು.


ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ, ಸೂರ್ಯ ನಾರಾಯಣ್, ಸುನಿಲ್ ಕೆ ಆರ್, ಪುನೀತ್ ಬಜರಂಗದಳ, ನವೀನ್ ನೆರಿಯ, ಮೂಲ ಚಂದ್ರ, ಪ್ರಮೋದ್ ರೈ, ಜಯಂತ್ ಕಲ್ಲುಗುಡ್ಡೆ, ಮಾತೃ ಶಕ್ತಿಯ ಗೀತಾ, ಮುಂತಾದವರು ಉಪಸ್ಥಿತರಿದ್ದರು.


ಮರಳಿ ಬಂದ ಕುಟುಂಬಗಳಿಗೆ, ಬಟ್ಟೆಗಳು, ದಿನಸಿ ಸಾಮಗ್ರಿಗಳು, ವಿವಿಧ ದೇವರುಗಳ ಫೋಟೋಗಳು, ಮತ್ತು ಇತರ ಗೃಹ ಉಪಯೋಗಿ ಸಾಮಗ್ರಿಗಳನ್ನು ವಿತರಿಸಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net