ಕಡಬ ಅಡೆಂಜದಲ್ಲಿ ಕಾಡಾನೆ ಹಿಂಡು ದಾಳಿ

IMG-20220729-WA0016
Published on

ಮಂಗಳೂರು: ಕಾಡಾನೆ ಹಿಂಡೊಂದು ಅಡಕೆ ತೋಟಕ್ಕೆ ನುಗ್ಗಿ ಅಡಕೆ ಮರ ಹಾಗೂ ಜೇನು ಕೃಷಿಯ ಜೊತೆ ನಿಲ್ಲಿಸಲಾಗಿದ್ದ ಸ್ಕೂಟರ್ ಗೆ ಹಾನಿ ಮಾಡಿರುವ ಘಟನೆ ನೂಜಿಬಾಳ್ತಿಲ ಗ್ರಾಮದ ಅಡೆಂಜ ಭಾಗದಲ್ಲಿ ಗುರುವಾರ ರಾತ್ರಿ ನಡೆದಿದೆ.

ಅಡೆಂಜ ನಿವಾಸಿ ಲಕ್ಷ್ಮಣ ಪೆತ್ತಲ ಹಾಗೂ ಸುಂದರ ಪೆತ್ತಲ ಎಂಬವರಿಗೆ ಸೇರಿದ 25 ಕ್ಕೂ ಹೆಚ್ಚಿನ ಅಡಕೆ ಗಿಡ, ಜಯಪ್ರಕಾಶ್ ಪೆತ್ತಲ ಎಂಬವರಿಗೆ ಸೇರಿದ 14 ಜೇನು ಪೆಟ್ಟಿಗೆ ಹಾಗೂ ಕಿಶೋರ್ ಪಾದೆ ಎಂಬವರಿಗೆ ಸೇರಿದ ಸ್ಕೂಟರನ್ನು ಕಾಡಾನೆ ಹಿಂಡು ಹಾನಿಗೊಳಿಸಿದೆ. ಕಾಡಾನೆ ದಾಳಿಯಿಂದಾಗಿ ಪರಿಸರದ ಜನತೆ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net