

ಬ್ರಹ್ಮಾವರ: ಕಚ್ಚೂರು ಶ್ರೀ ಮಾಲ್ತಿದೇವಿ ಶ್ರೀ ಬಬ್ಬುಸ್ವಾಮಿ ಮೂಲ ಕ್ಷೇತ್ರದ ಜಾತ್ರಾ ಮಹೋತ್ಸವ ಜ.21ರವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಜರುಗಲಿದೆ.
ಹಸಿರು ಹೊರೆಕಾಣಿಕೆ ಮೆರವಣಿಗೆ ಶುಕ್ರವಾರ ನಡೆಯಿತು. ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಆಡಳಿತ ಮೊಕ್ತೇಸರ ಬಿ.ಎನ್. ಶಂಕರ ಪೂಜಾರಿ, ಧಾರ್ಮಿಕ ಮುಖಂಡ ಪ್ರೇಮಾನಂದ ಶೆಟ್ಟಿ ಕಟ್ಕೆರೆ, ಬಾರ್ಕೂರು ಗ್ರಾಪಂ ಅಧ್ಯಕ್ಷ ಶಾಂತಾರಾಮ ಶೆಟ್ಟಿ ಮೊದಲಾದವರು ಬಾರ್ಕೂರು ಕಲ್ಲು ಚಪ್ಪರದ ಬಳಿ ಮೆರವಣಿಗೆಗೆ ಚಾಲನೆ ನೀಡಿದರು. ದೇವಳ ಧರ್ಮದರ್ಶಿ ಗೋಕುಲ್ದಾಸ್ ಬಾರ್ಕೂರು, ಅಧ್ಯಕ್ಷ ಶಿವಪ್ಪ ನಂತೂರು ಸೇರಿ ನಾನಾ ಭಾಗದ ಗುರಿಕಾರರು ಹಾಗೂ ಬಬ್ಬುಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯವರು ಮೆರವಣಿಗೆಯಲ್ಲಿದ್ದರು. ಪೂರ್ಣಕುಂಭ, ಟ್ಯಾಬ್ಲೋಗಳು, ಚಂಡೆ ವಾದನ, ನಾಸಿಕ್ ಬ್ಯಾಂಡ್ನೊಂದಿಗೆ ಮೆರವಣಿಗೆ ಸಾಗಿತ್ತು. ನೂರಾರು ವಾಹನದಲ್ಲಿ ಹಸಿರು ಹೊರೆಕಾಣಿಕೆ ರಥಬೀದಿ ಮೂಲಕ ದೇವಸ್ಥಾನ ತಲುಪಿತು.