

ಹನುಮಸಾಗರ: ವಿಧಾನಸಭೆ ಚುನಾವಣೆ ನಿಮಿತ್ತ ವಿವಿಧ ಗ್ರಾಮಗಳಲ್ಲಿ ಗುರುವಾರ ಅರೆಸೇನಾ ಪಡೆ ಹಾಗೂ ಪೊಲೀಸ್ ಸಿಬ್ಬಂದಿ ಪಥ ಸಂಚಲನ ನಡೆಸಿದರು. ಕಬ್ಬರಗಿ, ಕಾಟಾಪುರ, ಬಂಡರಗಲ್ ಸೇರಿ ವಿವಿಧ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿದ ಅರೆಸೇನಾ ಪಡೆ ಹಾಗೂ ಪೊಲೀಸ್ ಸಿಬ್ಬಂದಿ, ಮತದಾರರಿಗೆ ಧೈರ್ಯ ತುಂಬಿದರು.
ಶಾಂತಿ ಸುವ್ಯವಸ್ಥೆ ಕಾಪಾಡಲು, ಶಾಂತಿಯುತವಾಗಿ ಮತದಾನವಾಗಬೇಕೆಂಬ ಉದ್ದೇಶದಿಂದ ಮತ್ತು ಮತದಾರರು ನಿರ್ಭೀತಿಯಿಂದ ಹಕ್ಕು ಚಲಾಯಿಸುವಂತೆ ಉತ್ತೇಜಿಸಲು ಪಥಸಂಚಲನ ಆಯೋಜಿಸಲಾಗಿತ್ತು. ಪಿಎಸ್‌ಐಗಳಾದ ಸುನೀಲ್ ಎಚ್., ಶ್ರೀಶೈಲರಾವ್ ಕುಲಕರ್ಣಿ ಇತರರಿದ್ದರು. ಗ್ರಾಮದ ಪ್ರಮುಖರು, ಗ್ರಾಪಂ ಸಿಬ್ಬಂದಿ, ಯುವಕರು ಪಥ ಸಂಚಲನದಲ್ಲಿ ಪಾಲ್ಗೊಂಡರು.
ಇದನ್ನೂ ಓದಿ: ವೀರ ಯೋಧರ ಸ್ಫೂರ್ತಿಯಲ್ಲಿ..