ವಿದ್ಯುತ್ ಅವಘಡಕ್ಕೆ ಕಬ್ಬ ಭಸ್ಮ

Kabba Bhasma due to electrical accident
ಜಮಖಂಡಿ ತಾಲೂಕಿನ ತುಂಗಳ ಗ್ರಾಮದಲ್ಲಿ ಆದಿನಾಥ ಹಿಡಕಲ್ ಅವರ ಜಮೀನಿನಲ್ಲಿನ ಕಬ್ಬು ಬೆಳೆ ಸುಟ್ಟಿರುವುದು.
Published on

ಜಮಖಂಡಿ: ತಾಲೂಕಿನ ತುಂಗಳ ಗ್ರಾಮದಲ್ಲಿ ವಿದ್ಯುತ್ ಅವಘಡದಿಂದ ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬು ಸಂಪುರ್ಣ ಬೆಂಕಿಗಾಹುತಿಯಾಗಿದೆ.

ಆದಿನಾಥ ರಾಮಪ್ಪ ಹಿಡಕಲ್ ಎಂಬುವರಿಗೆ ಸೇರಿದ ಕಬ್ಬು ಬೆಳೆ ಹೆಸ್ಕಾಂ ಇಲಾಖೆ ನಿರ್ಲಕ್ಷೃದಿಂದ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ರೈತ ಆರೋಪಿಸಿದ್ದಾರೆ.

ವಾರದ ಹಿಂದೆ ವಿದ್ಯುತ್ ವೈಯರ್ ಸರಿಪಡಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ.
ಹೆಸ್ಕಾಂ ಇಲಾಖೆ ಅಧಿಕಾರಿಗಳು ನಿರ್ಲಕ್ಷೃದಿಂದ ಅಂದಾಜು 6 ಲಕ್ಷ ರೂಗಳಷ್ಟು ಬೆಳೆ ನಷ್ಟ ಉಂಟಾಗಿದ್ದು ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net