ಕ್ರಿಕೆಟ್‌ನಲ್ಲಿ ಕಬ್ಬಳ್ಳಿ ತಂಡ ಚಾಂಪಿಯನ್

15-SEP-GPT-2
ಗುಂಡ್ಲುಪೇಟೆ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಫೈನಲ್ ಕ್ರಿಕೆಟ್ ಪಂದ್ಯದಲ್ಲಿ ಜಯ ಗಳಿಸಿದ ಕಬ್ಬಳ್ಳಿ ತಂಡ.
Published on

ಗುಂಡ್ಲುಪೇಟೆ : ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣಲ್ಲಿ ನಡೆದ ಎರಡನೇ ವರ್ಷದ ವಿಶ್ವಕರ್ಮ ಜಯಂತ್ಯುತ್ಸವದ ಅಂಗವಾಗಿ ಆಯೋಜಿಸಿದ್ದ ಫೈನಲ್ ಕ್ರಿಕೆಟ್ ಪಂದ್ಯದಲ್ಲಿ ಕಬ್ಬಳ್ಳಿ ತಂಡ ಜಯ ಗಳಿಸಿದೆ.

ಭಾನುವಾರ ನಡೆದ ಪಂದ್ಯಾವಳಿಯಲ್ಲಿ ಎಂಟು ತಂಡಗಳು ಭಾಗವಹಿಸಿದ್ದು ಫೈನಲ್ ಪಂದ್ಯದಲ್ಲಿ ಕಬ್ಬಹಳ್ಳಿ ತಂಡ ಮೂಡಗೂರು ತಂಡವನ್ನು ಏಳು ವಿಕೆಟ್ ಅಂತರದಲ್ಲಿ ಸೋಲಿಸಿ ಪ್ರಥಮ ಬಹುಮಾನ ಪಡೆಯಿತು. 10 ಸಾವಿರ ರೂ. ನಗದು ಮತ್ತು ಟ್ರೋಫಿ ಪಡೆದುಕೊಂಡಿತು. ಪಂದ್ಯ ಶ್ರೇಷ್ಠ್ಠನಾಗಿ ಡಾ.ವಿನಯ್ ಕುಮಾರ್, ಸರಣಿ ಶ್ರೇಷ್ಠನಾಗಿ ಸುಖೇಶ್, ಬೋಲಿಂಗ್ ಶ್ರೇಷ್ಠನಾಗಿ ಹೊರಹೊಮ್ಮಿದ ತಂಡದ ನಾಯಕ ಮಂಜು ಅವರನ್ನು ನಗದು ಮತ್ತು ಪಾರಿತೋಷಕಗಳೊಂದಿಗೆ ಸನ್ಮಾನಿಸಲಾಯಿತು.

ಚಾಮುಲ್ ನಿರ್ದೇಶಕ ಎಚ್.ಎಸ್. ನಂಜುಂಡಪ್ರಸಾದ್ ಹಾಗೂ ವಿಶ್ವಕರ್ಮ ಸಮುದಾಯ ಮುಖಂಡರು, ಯುವಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net