ಮೆಕ್ವೆ ಗೇಟ್, ಪುತ್ತೂರು ಕ್ಲಬ್, ಪುತ್ತೂರು ಗೇಟ್ ಭಾಗದಲ್ಲಿ ೧೮ ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣವಾಗಲಿದೆ. ವಂದೇ ಭಾರತ್ ರೈಲಿಗೆ ಬೇಕಾದ ಕೋಚ್ ವಾಚರ್ ಸಿಸ್ಟಮ್ ಅನ್ನು ೫ ಕೋಟಿ ರೂ. ವೆಚ್ಚದಲ್ಲಿ ಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲಿ ಮಾಡಲಾಗಿದೆ. ಕಬಕ ಪುತ್ತೂರಿನ ಎರಡನೇ ಫ್ಲಾಟ್ ಫಾರ್ಮ್ ಸೇರಿದಂತೆ ನಿಲ್ದಾಣದ ಸಮಗ್ರ ಅಭಿವೃದ್ಧಿಗೆ ಪ್ಲ್ಯಾನ್ ಮಾಡಲಾಗುವುದು. ಸಿಆರ್‌ಎಫ್‌ನಲ್ಲಿ ೫೭ ಕೋಟಿ ರೂ. ಅನುದಾನಬಂದಿದ್ದು, ಪಿಡಬ್ಲ್ಯುಡಿ, ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.