ಮನೆಯ ಸಮೀಪ ವಾಸವಿರುವ ರಾಣಿ ಮತ್ತು ಮಕ್ಕಳಾದ ಶಿವಕುಮಾರ್, ಯಶೋದ ಅವರ ಜತೆಗೆ ರಸ್ತೆಯ ವಿಚಾರದಲ್ಲಿ ತಕರಾರು ಇದ್ದು, ಈ ವಿಚಾರವಾಗಿ ಭಾನುವಾರ ಬೆಳಗ್ಗೆ ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ. ಆಶಿಕ್‌ನನ್ನು ಶಿವಕುಮಾರ್ ಕೈಯಿಂದ ದೂಡಿ ನೆಲಕ್ಕೆ ಬೀಳಿಸಿದ್ದು, ತಡೆಯಲು ಅಣ್ಣಂದಿರಾದ ಇಲ್ಯಾಸ್ ಬಿ, ರಿಯಾಜ್ ಕೆ ಹಾಗೂ ತಾಯಿ ಹಾಜಿರ ಮುಂದಾದ ಸಮಯ ಕೊಲ್ಲದೆ ಬಿಡುವುದಿಲ್ಲ ಎಂದು ಟೈಲ್ಸ್ ತುಂಡಿನಿಂದ ಇಲ್ಯಾಸ್ ತಲೆ ಹಿಂಭಾಗಕ್ಕೆ ಹೊಡೆದಿದ್ದಾನೆ. ರಾಡ್‌ನಿಂದ ರಿಯಾಜ್‌ನ ಹಣೆಗೆ, ಬಲ ಕಿವಿಯ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ. ಮಹಿಳೆಯ ಸೀರೆಯನ್ನು ಎಳೆದು ಅವಮಾನಗೊಳಿಸಿದ್ದಾರೆ. ಆಶಿಕ್,ಇಲ್ಯಾಸ್, ರಿಯಾಜ್, ಹಾಜಿರ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಶಿಕ್(೩೫) ನೀಡಿದ ದೂರಿನ ಪ್ರಕಾರ ಶಿವಕುಮಾರ್ (೩೦), ಯಶೋದ, ರಾಣಿ ವಿರುದ್ಧ ಪ್ರಕರಣ ದಾಖಲಾಗಿದೆ.