ಪುತ್ತೂರು: ಕಬಕ ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ಪ್ಲ್ಯಾಟ್-ಫಾರ್ಮ್ ನಂ.೧ಕ್ಕೆ ಸಂಪೂರ್ಣ ಛಾವಣಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಪ್ಲ್ಯಾಟ್-ಫಾರ್ಮ್ ನಂ.೨ರಲ್ಲಿ ೨೦೦ ಚದರ ಮೀಟರ್ ಛಾವಣಿ ನಿರ್ಮಾಣ ನಡೆಯಲಿದೆ.
ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ರೈಲು ಹತ್ತುವ ಸ್ಥಳಗಳಿಗೆ ಛಾವಣಿಯಿಲ್ಲದೆ, ಪ್ರಯಾಣಿಕರು ಒದ್ದೆಯಾಗುತ್ತಿದ್ದಾರೆ. ಈ ಬಗ್ಗೆ ರೈಲ್ವೆ ಯಾತ್ರಿಕ ಶ್ರೀಕರ ಬಿ ಗ್ರಿವಿಯನ್ಸ್ ಆಪ್‌ನಲ್ಲಿ ದೂರು ನೀಡಿದ್ದು, ಇಲಾಖೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದೆ. ಪ್ಲ್ಯಾಟ್-ಫಾರ್ಮ್‌ಗೆ ಸರಿಯಾದ ಛಾವಣಿಯಿಲ್ಲದೆ ಮಳೆಗಾಲದಲ್ಲಿ ಒದ್ದೆಯಾಗುತ್ತಿರುವ ಬಗ್ಗೆ ‘ವಿಜಯವಾಣಿ’ ವರದಿ ಪ್ರಕಟಿಸಿ ಅಽಕಾರಿಗಳ ಗಮನಕ್ಕೆ ತಂದಿತ್ತು. ಈಗ ಬಗ್ಗೆ ಕಾರ್ಯ ಯೋಜನೆಯನ್ನು ಇಲಾಖೆ ಸಿದ್ಧಪಡಿಸಿದೆ.