

ಕಬಕ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಅಂಗವಾಗಿ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಶಾಲೆಯೊಂದರ ವಿದ್ಯಾರ್ಥಿಗಳು ರಾಷ್ಟ್ರಕ್ಕೆ ಅವಮಾನ ಮಾಡುವ ಕಾರ್ಯ ಮಾಡಿದ್ದಾರೆ.
ಕಬಕದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕ್ರಮಕ್ಕೆ ಶಾಸಕ ಅಶೋಕ್ ಕುಮಾರ್ ರೈ ಚಾಲನೆ ನೀಡಿದರು. ಆ ಬಳಿಕ ಕುಂಬ್ರದಲ್ಲಿ ನಡೆಯುವ ಬೈಕ್ ಮೆರವಣಿಗೆಗೆ ಚಾಲನೆ ನೀಡುವ ನಿಟ್ಟಿನಲ್ಲಿ ತೆರಳಿದ್ದಾರೆ.
ಕಬಕದಲ್ಲಿ ಮಾನವ ಸರಪಳಿಗೆ ಕೇಸರಿ ಬಿಳಿ ಹಸಿರು ಬಣ್ಣದಿಂದ ಕೊಡಿದ ಬಂಟ್ಟಿಂಗ್ ನೀಡಿಕೊಂಡು ಹೋಗಲಾಗಿದೆ. ಕೊನೆಯ ಭಾಗದಲ್ಲಿ ಹಸಿರು ಬಣ್ಣವನ್ನು ನೀಡುತ್ತಾ ಹೋಗಿರುವುದು ಅನ್ಯಧರ್ಮದ ವ್ಯಕ್ತಿಯಂಬ ಕಾರಣದಿಂದ ಅದನ್ನು ಕೈಯಲ್ಲಿ ಹಿಡಿಯದೆ ಕಾಲಿನಿಂದ ತುಳಿಯಲಾಗಿದೆ.
ಕೆಲವು ಶಿಕ್ಷಕಿಯರು ವಿದ್ಯಾರ್ಥಿಗಳಿಗೆ ಬುದ್ದಿ ಹೇಳುವ ಕಾರ್ಯ ಮಾಡಿದರೂ ವಿದ್ಯಾರ್ಥಿಗಳು ಕಿವಿಗೆ ಹಾಕದೆ ಹಸಿರು ಬಣ್ಣವನ್ನು ತಿರಸ್ಕರಿಸಿದ್ದಾರೆ. ಇದರ ಜತೆಗೆ ಒಂದು ಸಮುದಾಯಕ್ಕೆ ಸೇರಿದ ಘೋಷಣೆ ಕೂಗುವ ಮೂಲಕ ಬೇರೆ ಸಮುದಾಯದವರನ್ನು ಕೆರಳಿಸುವ ಪ್ರಯತ್ನ ಮಾಡಿದ್ದಾರೆ.
ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಅರ್ಥ ತಿಳಿಯ ಬೇಕಾದ ಯುವ ಸಮುದಾಯ ಅರ್ಥ ಪೂರ್ಣ ಕಾರ್ಯಕ್ರಮಕ್ಕೆ ಕಪ್ಪು ಚುಕ್ಕೆ ಇಡುವ ಪ್ರಯತ್ನ ಮಾಡಿದ್ದಾರೆ.