ಗೌಡಳ್ಳಿ ಹನುಮಾನ್ ಬಾಯ್ಸ ತಂಡ ಪಾರಮ್ಯ

18spt3
Published on

17 ವರ್ಷದೊಳಗಿನ ಬಾಲಕರ ಕಬಡ್ಡಿ ಪಂದ್ಯಾವಳಿ
ಸೋಮವಾರಪೇಟೆ : ಹನುಮಾನ್ ಕಬಡ್ಡಿ ಕ್ಲಬ್ ವತಿಯಿಂದ ಗೌಡಳ್ಳಿ ಬಿಜಿಎಸ್ ಶಾಲಾ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 17 ವರ್ಷದೊಳಗಿನ ಬಾಲಕರ ಕಬಡ್ಡಿ ಪಂದ್ಯಾವಳಿಯಲ್ಲಿ ಗೌಡಳ್ಳಿ ಹನುಮಾನ್ ಬಾಯ್ಸ ತಂಡ ಪಾರಮ್ಯ ಮೆರೆಯಿತು. ತಂಡವು ಪ್ರಥಮ ಬಹುಮಾನ 3, 000 ರೂ. ನಗದು ಮತ್ತು ಆಕರ್ಷಕ ಟ್ರೋಫಿ ಮುಡಿಗೇರಿಸಿಕೊಂಡಿತು. ಕಳಲೆ ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನದೊಂದಿಗೆ 1,500 ರೂ.ನಗದು ಹಾಗು ಟ್ರೋಫಿಯನ್ನು ಗಳಿಸಿತು. ಪಂದ್ಯಾವಳಿಯಲ್ಲಿ 9 ತಂಡ ಭಾಗವಹಿಸಿದ್ದವು. ಗೌಡಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್, ದಾನಿಗಳಾದ ಶಾಂತಮಲ್ಲಪ್ಪ, ಸುಮಂತ್ ಕೂಗೂರು, ಪವನ್, ನಾಗರಾಜು, ನವೀನ್ ಅಜ್ಜಳ್ಳಿ, ಸುನಿಲ್ ಗೌಡಳ್ಳಿ ಇತರರು ಬಹುಮಾನ ವಿತರಿಸಿದರು. ತೀರ್ಪುಗಾರರಾಗಿ ಮಧುಸೂದನ್, ಗಣೇಶ್ ಕಾರ್ಯನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net