

ಚಿಕ್ಕೋಡಿ: ಮಹಿಳೆಯರಿಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ರಾಷ್ಟ್ರಮಟ್ಟದ ಮುಕ್ತ ಮಹಿಳಾ ಕಬಡ್ಡಿ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಪಟ್ಟಣದ ಆರ್.ಡಿ.ಮೈದಾನದಲ್ಲಿ ಅ.14ರಂದು ಸಿಟಿಇ ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಮುಕ್ತ ಮಹಿಳಾ ಕಬಡ್ಡಿ ಪಂದ್ಯಾವಳಿ ತಯಾರಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿ, ವಿಶೇಷವಾಗಿ ನಿರ್ಮಿಸಿದ ಕಬಡ್ಡಿ ಆಟದ ಮೈದಾನ ಹಾಗೂ ಕ್ರೀಡಾ ಪ್ರೇಮಿಗಳಿಗೆ ವೀಕ್ಷಿಸಲು ನಿರ್ಮಿಸಿದ ಆಸನಗಳ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ರೀಡಾಕೂಟಕ್ಕೆ ಸುಮಾರು 28ಕ್ಕಿಂತ ಹೆಚ್ಚು ತಂಡಗಳು ನೋಂದಣಿ ಆಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಚಿಕ್ಕೋಡಿ ಪುರಸಭೆ ಮಾಜಿ ಅಧ್ಯಕ್ಷ ಪಿ.ಐ.ಕೋರೆ, ಸಂಸ್ಥೆಯ ಹಿರಿಯ ನಿರ್ದೇಶಕ ಸತೀಶ ಕುಲಕರ್ಣಿ, ನಿರ್ದೇಶಕ ಓಂಕಾರ ಕುಲಕರ್ಣಿ, ಜಂಟಿ ಕಾರ್ಯದರ್ಶಿ ಮಿಥುನ ದೇಶಪಾಂಡೆ ಇತರರಿದ್ದರು.