ಕಬಡ್ಡಿ ಪಂದ್ಯಾವಳಿ ಸಮಾರೋಪ ಸಮಾರಂಭ

mm 1-10
Published on

ವಿಜಯಪುರ:ಮೊಬೈಲ್​ ಗೇಮ್​ಗಳಿಗೆ ತಲ್ಲೀನರಾಗುತ್ತಿರುವ ಯುವಜನತೆ ಕ್ರೀಡಾಂಗಣದ ಆಟಗಳನ್ನು ಮರೆಯುತ್ತಿದ್ದು, ವಿದ್ಯಾರ್ಥಿಗಳನ್ನು ದೈಹಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ದೇಸಿ ಕಬಡ್ಡಿ ಪಂದ್ಯಾವಳಿಯ ಹಮ್ಮಿಕೊಂಡಿರುವ ಕಾರ್ಯ ಶ್ಲಾನೀಯ ಎಂದು ಸಿದ್ಧೇಶ್ವರ ಸಂಸ್ಥೆ ಅಧ್ಯಕ್ಷ, ಶಾಸಕ ಬಸನಗೌಡ ಪಾಟೀಲ ಹೇಳಿದರು.

ತಾಲೂಕಿನ ಕವಲಗಿ ಗ್ರಾಮದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಸಿಬಿಎಸ್​ಇ ಕ್ಲಸ್ಟರ್​ನ 8ನೇ ಕಬಡ್ಡಿ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡಿದರು.

ವಿಜಯಪುರ ನಗರ ಸದ್ಯ ಒಳ್ಳೆಯ ಗಾಳಿಯ ನಗರ ಪಟ್ಟಿಯಲ್ಲಿ ಪ್ರಮುಖ ಸ್ಥಾನದಲ್ಲಿದೆ. ಮುಂಬರುವ ದಿನಗಳಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಕಲಾಗಿದ್ದು, ವಿದ್ಯಾರ್ಥಿಗಳು ತಪ್ಪದೆ ಕ್ರೀಡಾಕೂಟಗಳಲ್ಲಿ ಭಾಗಿಯಾಗಬೇಕೆಂದು ಸಲಹೆ ನೀಡಿದರು.

ಬೆಂಗಳೂರಿನ ಪೋಲಿಸ್​ ಪಬ್ಲಿಕ್​ ಶಾಲೆ ಮುಖ್ಯ ಶಿಕ್ಷಕಿ ಅರ್ಚನಾ ಗುಪ್ತಾ ಅನಿಸಿಕೆ ಹಂಚಿಕೊಂಡರು. ಬೆಂಗಳೂರಿನ ಪ್ರಾರ್ಥನಾ ಸೆೆಂಟರ್​ ಶಾಲೆಯ ಕಬಡ್ಡಿ ತಂಡದ ತರಬೇತುದಾರ ಸತೀಶ ಶೆಟ್ಟಿ ಪಂದ್ಯಾವಳಿಗೆ ಆಗಮಿಸಿದ್ದ ಆಟಗಾರರಿಗೆ ವಸತಿ, ಊಟ ಸೇರಿ ಇನ್ನಿತರ ವ್ಯವಸ್ಥೆ ಮಾಡಿದ್ದರು.

ಪಂದ್ಯಾವಳಿಯಲ್ಲಿ ಅಂದಾಜು 87 ಶಾಲೆಯ 1,809 ಕ್ಕಿಂತ ಅಧಿಕ ವಿದ್ಯಾರ್ಥಿಗಳು ಮೂರು ವಿಭಾಗದಲ್ಲಿ ಭಾಗವಹಿಸಿದ್ದರು. ಸಂಯೋಜಕರಾಗಿ ಅಜಿತ ಕವಟೆಕರ ಕಾರ್ಯ ನಿರ್ವಹಿಸಿದರು. ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಜ್ಯೋತಿ ಪಡಸಾಲಿ ಸ್ವಾಗತಿಸಿದರು. ಪ್ರಾಚಾರ್ಯ ಹೇಮಂತ್​ ಕೃಷ್ಣ ಬಹುಮಾನ ವಿತರಣಾ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ರಾಮದಾಸ್​ ಮೇಡಬೇನೆ ನಿರೂಪಿಸಿದರು. ಪ್ರಾಚಾಯೆರ್ ಶರ್ಮಿಳಾ ಹೇಮಂತ್​ ವಂದಿಸಿದರು. ಕಬಡ್ಡಿ ಅಮೆಚೂರ್​ ಸಂಸ್ಥೆಯ ರಮೇಶ ಪಾಟೀಲ, ಎಂ.ಕೆ. ಪಾಟೀಲ ಇತರರಿದ್ದರು.

ಕವಲಗಿ ಗ್ರಾಮದ ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ಸಿಬಿಎಸ್​ಇ ಕ್ಲಸ್ಟರ್​ನ 8ನೇ ಕಬಡ್ಡಿ ಪಂದ್ಯಾವಳಿಯ ಸಮಾರೋಪ ಸಮಾರಂಭ ನಡೆಯಿತು. ಬಸನಗೌಡ ಪಾಟೀಲ ಯತ್ನಾಳ, ಶರ್ಮಿಳಾ ಹೇಮಂತ್​, ಅಜಿತ ಕವಟೆಕರ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net