

ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಮತ್ತು ಪುಂಜಾಲಕಟ್ಟೆ ಪಿಲಾತಬೆಟ್ಟು ಕೃಷಿ ಪತ್ತಿನ ಸಹಕಾರಿ ಸಂದ ಸಹಭಾಗಿತ್ವದಲ್ಲಿ ಕೋಲಾರದಲ್ಲಿ ನಡೆದ ಅಂತರ್‌ಜಿಲ್ಲಾ ಮಟ್ಟದ ಜೂನಿಯರ್ ರಾಜ್ಯ ಕಬಡ್ಡಿ ಪಂದ್ಯಾಟದಲ್ಲಿ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ, ಮಹಿಳೆಯರ ವಿಭಾಗದಲ್ಲಿ ದ್ವಿತೀಯ ಸ್ಥಾನದೊಂದಿಗೆ ವಿಜೇತರಾದ ಕಾಲೇಜು ವಿದ್ಯಾರ್ಥಿಗಳ ತಂಡವನ್ನು ಹಾಗೂ ಈ ತಂಡಗಳ ತರಬೇತುದಾರರಾದ ಹಬೀಬ್ ಹಾಗೂ ಚಂದ್ರಶೇಖರ್ ಕರ್ಣ ಅವರನ್ನು ಅಭಿನಂದಿಸಲಾಯಿತು.
ಉದ್ಯಮಿ ಮಂಜುನಾಥ್ ಆಚಾರ್ಯ, ಪಿಲಾತಬೆಟ್ಟು ಸಹಕಾರಿ ಸಂದ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ, ಉಪಾಧ್ಯಕ್ಷ ರವಿಶಂಕರ್ ಹೊಳ್ಳ, ನಿರ್ದೇಶಕರಾದ ಸರೋಜಿನಿ ಡಿ. ಶೆಟ್ಟಿ, ಶಶಿಧರ ನಾಯ್ಕ, ಪ್ರಭಾಕರ ಪಿ.ಎಂ., ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸಂಚಾಲಕ ಅಬ್ದುಲ್ ಹಮೀದ್, ವಾಜಿ ಅಧ್ಯಕ್ಷ ಎಂ.ವಾಧವ ಬಂಗೇರ, ರತ್ನಾಕರ ಸಹಕಾರಿ ಸಂದ ಕಾರ್ಯದರ್ಶಿ ಬಬಿತಾ, ನಾರಾಯಣ ಗುರು ವಸತಿ ಶಾಲೆಯ ಪ್ರಾಂಶುಪಾಲ ಸಂತೋಷ್ ಸನಿಲ್ ಹಾಗೂ ಲೋಕೇಶ್ ಆಚಾರ್ಯ, ಪಿಲಾತಬೆಟ್ಟು ಗ್ರಾ.ಪಂ. ಸದಸ್ಯ ಕಾಂತಪ್ಪ ಕರ್ಕೇರ ಹಾಗೂ ಹಮೀದ್, ನಾಸಿರ್, ಇಲ್ಯಾಸ್ ಮೊದಲಾದವರಿದ್ದರು.