ದೈಹಿಕ, ಮಾನಸಿಕ ದೃಢತೆಗೆ ಕ್ರೀಡೆ ಸಹಕಾರಿ

kabaddi
ತಾಲೂಕು ಮಟ್ಟದ ಪದವಿ ಪೂರ್ವ ವಿಭಾಗದ ಕಬಡ್ಡಿ ಪಂದ್ಯಾಟವನ್ನು ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಸಂಚಾಲಕ ಡಾ.ಪಿ.ಬಾಲಕೃಷ್ಣ ಆಳ್ವ ಉದ್ಘಾಟಿಸಿದರು.
Published on

ಕಾರ್ಕಳ: ಕ್ರೀಡೆ ಮನೋರಂಜನೆ ಮಾತ್ರ ನೀಡದೆ ದೈಹಿಕ ಹಾಗೂ ಮಾನಸಿಕ ದೃಢತೆಗೆ ಪ್ರಯೋಜನಕಾರಿ. ಕ್ರೀಡೆಗಳಲ್ಲಿ ಸೋಲು ಗೆಲುವು ಸಾಮಾನ್ಯ. ಸಿಕ್ಕ ಅವಕಾಶ ಉಪಯೋಗಿಸಿ ಯಶಸ್ಸಿನ ದಾರಿಯಲ್ಲಿ ಸಾಗಬೇಕಾಗಿದೆ ಎಂದು ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜು ಸಂಚಾಲಕ ಡಾ.ಪಿ.ಬಾಲಕೃಷ್ಣ ಆಳ್ವ ಹೇಳಿದರು.

ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಕಾರ್ಕಳ ತಾಲೂಕುಮಟ್ಟದ ಪದವಿ ಪೂರ್ವ ಕಾಲೇಜು ಮಟ್ಟದ ಬಾಲಕ ಬಾಲಕಿಯರ ಕಬಡ್ಡಿ ಟೂರ್ನಿ ಉದ್ಘಾಟಿಸಿ ಮಾತನಾಡಿದರು.

ಮುಂಡ್ಕೂರು ಗ್ರಾಪಂ ಅಧ್ಯಕ್ಷ ದೇವಪ್ಪ ಸಪಳಿಗ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಕಾರ್ಯದರ್ಶಿ ಪಾಂಡುರಂಗ ಪ್ರಭು, ಕೋಶಾಧಿಕಾರಿ ಡಾ.ಪ್ರಭಾಕರ ಶೆಟ್ಟಿಗಾರ್, ಸದಸ್ಯ ಅಶೋಕ್ ಶೆಟ್ಟಿ, ನಿವೃತ್ತ ಪ್ರಾಚಾರ್ಯ ಸುದರ್ಶನ್ ವೈ.ಎಸ್., ಪ್ರೌಢಶಾಲೆ ಮುಖ್ಯಸ್ಥೆ ಸವಿತಾ ಸದಾನಂದ್, ಬೆಳ್ಮಣ್ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ವಸಂತ ಆಚಾರ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕಾಲೇಜು ಪ್ರಾಚಾರ್ಯ ಮಾಲತೇಶ್ ಇಂಗಳಕಿ ಸ್ವಾಗತಿಸಿ, ಶಾಂತಾರಾಮ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಶರತ್ ರಾವ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net