ಹುಬ್ಬಳ್ಳಿ: ರಾಜ್ಯ ಮಟ್ಟದ ಚಾಂಪಿಯನ್ ಶಿಪ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಕಬಡ್ಡಿ ತಂಡದ ಆಯ್ಕೆ ಪ್ರಕ್ರಿಯೆ ನ. 10ರಂದು ಬೆಳಗ್ಗೆ 9ಕ್ಕೆ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ಬಸ್ ನಿಲ್ದಾಣ ಹತ್ತಿರ ನಡೆಯಲಿದೆ ಎಂದು ಧಾರವಾಡ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ತಿಳಿಸಿದೆ.
ಧಾರವಾಡ ಜಿಲ್ಲೆಯಿಂದ ಬಾಲಕ, ಬಾಲಕಿಯರ ಜೂನಿಯರ್ ತಂಡಗಳು ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಆಯ್ಕೆ ನಡೆಸಲಾಗುತ್ತದೆ. ಆಸಕ್ತರು, ಅಸೋಸಿಯೇಶನ್ ಸಂಪರ್ಕಿಸಬೇಕೆಂದು ಪ್ರಕಟಣೆ ಕೋರಿದೆ.